HSRP : ಶುರುವಾಯ್ತು ಹೊಸ ಸಮಸ್ಯೆ…..!

ಬೆಂಗಳೂರು

    ಕರ್ನಾಟಕದ ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮೇ 31ರ ಗಡುವು ನೀಡಿದೆ. ಇನ್ನೂ ಲಕ್ಷಾಂತರ ವಾಹನಗಳಿಗೆ ಹೆಚ್ಎಸ್‌ಆರ್‌ಪಿ ಅಳವಡಿಕೆ ಮಾಡಬೇಕಿದೆ. ಆದರೆ ಗಡುವು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಇಲಾಖೆ ಹೇಳುತ್ತಿದೆ.

     ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಆನ್‌ಲೈನ್ ಮೂಲಕ ನೋಂದಣಿ ಮಾಡುತ್ತಿರುವ ಜನರು ಸಾರಿಗೆ ಇಲಾಖೆಗೆ ಹೊಸ ದೂರನ್ನು ಹೊತ್ತು ತಂದಿದ್ದಾರೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ ಇಲಾಖೆ ಮೇ ಅಂತ್ಯ ಒಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಅನುಕೂಲ ಮಾಡಿಕೊಡಲಿದೆಯೇ? ಕಾದು ನೋಡಬೇಕಿದೆ.

       ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಅದರ ಅಧಿಕೃತ ಕಂಪನಿಗಳಿಂದ ಪಡೆಬೇಕಿದೆ. ಆದರೆ ಈಗ ನೋಂದಣಿಗೆ ಮುಂದಾಗಿರುವ fiat, cielo ambassador, LML, kinetic honda ಮುಂತಾದ ವಾಹನಗಳ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ.

      ಆದರೆ ಇಂತಹ ಹಲವು ಕಂಪನಿಗಳು ಸದ್ಯಕ್ಕೆ ಇಲ್ಲ. ಕೆಲವು ಕಂಪನಿಗಳು ಭಾರತದ ತಯಾರಿಕಾ ಘಟಕ ಮುಚ್ಚಿ ವಿದೇಶಕ್ಕೆ ಸ್ಥಳಾಂತರಗೊಂಡಿವೆ. ಆದ್ದರಿಂದ ಅಧಿಕೃತ ಮಾರಾಟಗಾರರನ್ನು ಹುಡುಕುವುದು ಹೇಗೆ? ಎಂಬುದು ಜನರ ಪ್ರಶ್ನೆಯಾಗಿದೆ.

     ಸಾರಿಗೆ ಇಲಾಖೆಯ ಹೆಚ್ಚುವರಿ ಆಯಕ್ತ (ಜಾರಿ) ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಭಾರತದಲ್ಲಿ ಇಲ್ಲದ ಕಂಪನಿಗಳ ಮೂಲಕ ನಂಬರ್ ಪ್ಲೇಟ್ ಪಡೆಯುವುದು ಹೇಗೆ? ಎಂಬ ಕುರಿತು ಇಲಾಖೆಗೆ ದೂರು ಬಂದಿವೆ ಎಂದು ಹೇಳಿದ್ದಾರೆ.

     ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ನೋಂದಣಿಗಾಗಿ ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾರಾಟಗಾರರನ್ನು ಆಯ್ಕೆ ಮಾಡಬೇಕು. ಆದರೆ ದೇಶದಲ್ಲಿ ತಯಾರಿಕಾ ಘಟಕ ಮುಚ್ಚಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಹೇಗೆ? ಎಂದು ವಾಹನದ ಮಾಲೀಕರು ಇಲಾಖೆಯನ್ನು ಕೇಳಿದ್ದಾರೆ ಎಂದು ತಿಳಿಸಿದ್ದಾರೆ.

     ಇಂತಹ ವಾಹನಗಳು ಕೆಲವು ಮಾತ್ರ ಇವೆ. ಅವುಗಳು ತಾಂತ್ರಿಕ ಕಾರಣದಿಂದ ಮೇ 31ರ ಗಡುವಿನೊಳಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

     ಸಾರಿಗೆ ಇಲಾಖೆ ಮೇ 31ರ ಗಡುವು ಬಳಿಕ ಹೆಚ್ಎಸ್ಆರ್‌ಪಿ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸುತ್ತೇವೆ. ಗಡುವು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದಿದ್ದರೆ ಮೊದಲ ಬಾರಿಗೆ 500 ರೂ. ಮತ್ತು ನಂತರವೂ ಆಳವಡಿಕೆ ಮಾಡದಿದ್ದರೆ 1000 ರೂ. ದಂಡ ಹಾಕಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ಲೋಕಸಭೆ ಮಾದರಿ ಚುನಾವಣಾ ನೀತಿ ಸಂಹಿತೆ ಜೂನ್‌ 4ರ ಬಳಿಕ ಮುಕ್ತಾಯಗೊಳ್ಳುತ್ತದೆ. ಬಳಿಕ ಸಾರಿಗೆ ಇಲಾಖೆ ಸರ್ಕಾರದ ಜೊತೆ ಚರ್ಚಿಸಿ, ಹೆಚ್ಎಸ್ಆರ್‌ಪಿ ಆಳವಡಿಕೆ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ. ಅಷ್ಟರಲ್ಲಿ ಹಳೆಯ ವಾಹನಗಳಿಗೆ ಏನು ಮಾಡಬೇಕು? ಎಂದು ಕೇಂದ್ರದಿಂದಲೂ ಮಾಹಿತಿ ಬರುವ ನಿರೀಕ್ಷೆ ಇದೆ.

     ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಬಗ್ಗೆ ಜನರಿಗೆ ಉಂಟಾಗುವ ಗೊಂದಲ ಬಗೆಹರಿಸಲು ಸಹಾಯವಾಣಿ ಆರಂಭಿಸಿದೆ. 9449863429/26 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಹೆಚ್ಎಸ್‌ಆರ್‌ಪಿಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು.

     ಜನರು https://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನಗಳಿಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ನೋಂದಣಿ ಮಾಡಿಕೊಳ್ಳಬಹುದು. ಈ ಪೋರ್ಟಲ್ ಮೂಲಕ ನೋಂದಣಿಯಾದ ಹೆಚ್‌ಎಸ್‌ಆರ್‌ಪಿಗಳು ಮಾತ್ರ ಮಾನ್ಯತೆ ಹೊಂದಿವೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap