ವಿಶ್ವದ ಅತ್ಯಂತ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಮುಖೇಶ್ ಅಂಬಾನಿ ಅವರು ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಹ್ಯಾಚ್ಬ್ಯಾಕ್ ಕಾರು 13.14 ಕೋಟಿ ರೂಪಾಯಿಯದು ಖರೀದಿಸಿದ್ದಾರೆ. ಆರ್ಟಿಒ ಅಧಿಕಾರಿಗಳ ಮಾತನ್ನು ನಂಬುವುದಾದರೆ, ಈ ವರೆಗೆ ದೇಶದಲ್ಲಿ ಖರೀದಿ ಆಗಿರುವ ಅತ್ಯಂತ ದುಬಾರಿ ಕಾರು.
ಈ ಕಾರು ರೋಲ್ಸ್ ರಾಯ್ಸ್ ಕಲಿನನ್ ಪೆಟ್ರೋಲ್ ಮಾಡೆಲ್. ಇದನ್ನು ರಿಲಯನ್ಸ್ನಿಂದ ದಕ್ಷಿಣ ಮುಂಬೈನ ಟಾರ್ಡಿಯೊ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನವರಿ 31, 2022ರಂದು ನೋಂದಣಿ ಆಗಿದೆ, ಎಂದು ಈ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ಹೇಳಿದ್ದಾರೆ.
2018ರಲ್ಲಿ ಈ ಕಾರು ಮೊದಲ ಬಾರಿಗೆ ಬಿಡುಗಡೆ ಆದಾಗ 6.95 ಕೋಟಿ ರೂಪಾಯಿ ಇತ್ತು. ವಾಹನ ಕೈಗಾರಿಕೆ ತಜ್ಞರು ಹೇಳುವಂತೆ, ಗ್ರಾಹಕರಿಗೆ ಬೇಕಾದಂತೆ ಮಾರ್ಪಾಡು ಮಾಡಿಸಿರುವುದರಿಂದ ಬೆಲೆ ಹೆಚ್ಚಾಗಿದೆ.
ಕಂಪೆನಿಯು “ಟಸ್ಕನ್ ಸನ್” ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 12 ಸಿಲಿಂಡರ್ನ ಈ ಕಾರು 2,500 ಕೇಜಿ ತೂಕದ್ದಾಗಿದೆ. 564 ಬಿಎಚ್ಪಿ ಪವರ್ ಉತ್ಪಾದಿಸುತ್ತದೆ. ಇದರ ಜತೆಗೆ ವಿಶೇಷ ನಂಬರ್ ಪ್ಲೇಟ್ ಹೊಂದಿದೆ, ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ