ಮೈಸೂರು:
ಪಾರ್ಟ್ ಟೈಂ ಉದ್ಯೋಗಾಕಾಂಕ್ಷಿಗಳು ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಬಯಸುವವರು ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಮೈಸೂರಿನಲ್ಲಿಯೇ ಕನಿಷ್ಠ 30 ಸಂತ್ರಸ್ತರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸಂಪೂರ್ಣ ಖಾಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಪ್ರಕಾರ, ಎಲ್ಲಾ ಸೈಬರ್ ವಂಚನೆಗಳಲ್ಲಿ ಸುಮಾರು ಶೇ 60 ರಷ್ಟು ಪ್ರಕರಣಗಳು ಈ ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಸಂಬಂಧಿಸಿದೆ. 20 ಸಾವಿರದಿಂದ 35 ಲಕ್ಷದವರೆಗೆ ಜನರು ಹಣ ಕಳೆದುಕೊಂಡಿದ್ದಾರೆ.
ಸಂತ್ರಸ್ತರ ನಂಬಿಕೆ ಗಳಿಸುವ ಸಲುವಾಗಿ ವೃತ್ತಿಪರರಂತೆ ನಟಿಸುವ ವಂಚಕರು, ಭ್ರಮೆಯ ಜಾಲವೊಂದನ್ನು ಹೆಣೆಯುತ್ತಾರೆ. ಸಂತ್ರಸ್ತರಿಗೆ ನಂಬಿಕೆ ಬರುವಂತೆ ಮಾಡಲು ಮೊದಲಿಗೆ ಕೆಲವು ಹಣ ಪಾವತಿಗಳನ್ನು ಮಾಡುತ್ತಾರೆ. ಆದರೆ, ನಂತರ ಸಂತ್ರಸ್ತರು ಹೆಚ್ಚು ಗಳಿಸಲು ಹೆಚ್ಚು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾರೆ. ಅಂತಿಮವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿದ ನಂತರ ಅವರು ಕಣ್ಮರೆಯಾಗುತ್ತಾರೆ.ಪ್ರಿಪೇಯ್ಡ್ ಟಾಸ್ಕ್ಗಳೆಂದರೆ.
ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರಿಗೆ, ಸಂತ್ರಸ್ತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಖಾತೆಗಳು ದೇಶದಾದ್ಯಂತ ಹರಡಿರುವ ವಿವಿಧ ಬ್ಯಾಂಕ್ ಶಾಖೆಗಳಲ್ಲಿವೆ ಎಂಬುದು ತಿಳಿದುಬಂದಿದೆ. ಇಂತಹ ಪ್ರಿಪೇಯ್ಡ್ ಟಾಸ್ಕ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.