ನವದೆಹಲಿ
ಭಾರತದ ಜೀವನಾಡಿ ಎಂದೇ ಕರೆಯಲಾಗುವ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ ಅದೇ ಸಾಲಿಗೆ ಮತ್ತೊಂದು ಹೊಸ ನಿಯಮ ತಂದಿದೆ.
ಈ ನಿಯಮ ಪ್ರಯಾಣಿಕರು ರಾತ್ರಿ ಸಮಯದಲ್ಲಿ ರೈಲಿನಲ್ಲಿ ಅರಮವಾಗಿ ವಿಶ್ರಾಂತಿ ಪಡೆಯಲು ಸೂಕ್ತವಾದ ನಿರ್ಧಾರವಾಗಿದೆ. ನಿದ್ರೆಯ ಸಮಯದಲ್ಲಿ ನೀವು ಇಳಿಯಬೇಕಾದ ನಿಲ್ದಾಣವನ್ನು ಅತೀ ಬೇಗನೆ ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.
ರಾತ್ರಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಹೆಚ್ಚಾಗಿ ಗಾಢ ನಿದ್ರೆ ಮಾಡುತ್ತಾರೆ ಆಗ ಇಳಿಯುವ ಸ್ಥಳ ಮಿಸ್ ಆಗದಂತೆ ಇರಲು ಈ ವ್ಯವಸ್ಥೆ ಉಪಕಾರಿಯಾಗಲಿದೆ. ನಿಲ್ದಾಣವನ್ನು ತಲುಪುವ 20 ನಿಮಿಷಗಳ ಮೊದಲು ನಿಮ್ಮನ್ನು ಎಚ್ಚರಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರೈಲ್ವೆ ಇಲಾಖೆ ಆರಂಭಿಸಿರುವ ಈ ವಿಶೇಷ ಸೇವೆಯ ಹೆಸರು “ಗಮ್ಯಸ್ಥಾನದ ಎಚ್ಚರಿಕೆ ಎಚ್ಚರ ಗೊಳ್ಳುವ ಎಚ್ಚರಿಕೆ”ಯಾಗಿದೆ. ವಾಸ್ತವವಾಗಿ, ರೈಲಿನಲ್ಲಿ ಮಲಗುವವರು ತಾವು ಇಳಿದು ಕೊಳ್ಳ ಬೇಕಾದ ಸ್ಥಳಗಳನ್ನು ತಪ್ಪಿಸಿಕೊಂಡಿರುವ ಬಗ್ಗೆಯೂ ರೈಲ್ವೆ ಇಲಾಖೆಗೆ ಹಲವು ಬಾರಿ ಮಾಹಿತಿ ಬಂದಿದೆ. ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲು ರೈಲ್ವೆ ಹೊಸ ಸೌಲಭ್ಯವನ್ನು ಆರಂಭಿಸಿದೆ. ರೈಲ್ವೆ 139 ಸಂಖ್ಯೆಯ ವಿಚಾರಣೆ ಸೇವೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಿದೆ.
ಪ್ರಯಾಣಿಕರು 139 ಸಂಖ್ಯೆಯ ವಿಚಾರಣಾ ವ್ಯವಸ್ಥೆಯಲ್ಲಿ ಈ ಸೌಲಭ್ಯವನ್ನು ಪಡೆಯಬಹು ದಾಗಿದೆ . ರಾತ್ರಿ 11ರಿಂದ ಬೆಳಗ್ಗೆ 7ರವರೆಗೆ ಲಭ್ಯವಿರುವ ಈ ಸೌಲಭ್ಯವನ್ನು ಯಾರು ಬೇಕಾದರೂ ಪಡೆಯಬಹುದು. ಇದರಿಂದ ನಿಲ್ದಾಣಕ್ಕೆ ಆಗಮಿಸುವ 20 ನಿಮಿಷಗಳ ಮೊದಲು ನಿಮ್ಮ ಫೋನ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ.
“ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್” ಅನ್ನು ಪಡೆಯಲು ಐಆರ್‌ಸಿಟಿಸಿಯ ಸಹಾಯವಾಣಿ 139ಕ್ಕೆ ಕರೆ ಮಾಡಬೇಕು. ಭಾಷೆಯನ್ನು ಆಯ್ಕೆ ಮಾಡಿದ ನಂತರ, ಗಮ್ಯಸ್ಥಾನದ ಎಚ್ಚರಿಕೆಗಾಗಿ ನೀವು ಮೊದಲು ಸಂಖ್ಯೆ 7 ಮತ್ತು ನಂತರ ಸಂಖ್ಯೆ 2 ಅನ್ನು ಒತ್ತಬೇಕು. ನಂತರ ನಿಮ್ಮ 10 ಅಂಕಿಯ ಫೋನ್ ನಂಬರ್ ಅನ್ನು ನಮೂದಿಸಿ. ಅದನ್ನು ಖಚಿತಪಡಿಸಲು 1 ಅನ್ನು ಡಯಲ್ ಮಾಡಿ. ಹೀಗೆ ಮಾಡುವುದರಿಂದ ನಿಲ್ದಾಣದ ಆಗಮನದ 20 ನಿಮಿಷಗಳ ಮೊದಲು ನೀವು ಎಚ್ಚರಗೊಳ್ಳುವ ಸಂದೇಶವನ್ನು ಪಡೆಯುತ್ತೀರಿ. ಹೀಗೆ ಐಆರ್‌ಸಿಟಿಸಿಯು ಪ್ರಯಾಣಿಕರು ತಾವು ಇಳಿದುಕೊಳ್ಳಬೇಕಾದ ಸ್ಥಳದ ಬಗ್ಗೆ ಮಾಹಿತಿ ನೀಡಲು ಈ ಹೊಸ ಸೌಲಭ್ಯವನ್ನು ಕಲ್ಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ