ಬೆಂಗಳೂರು
ಕೆಎಸ್‌ಆರ್‌ಟಿಸಿಯು ಇನ್ನು ಕೆಲವೇ ದಿನಗಳಲ್ಲಿ ಹೊಸ ಯೂರೋಪಿಯನ್ ಶೈಲಿಯ ವೋಲ್ವೋ 9600 ಮಲ್ಟಿ-ಆಕ್ಸಲ್ ಸ್ಲೀಪರ್ ಬಸ್ ಗಳನ್ನು ರಸ್ತೆ ಇಳಿಸಲಿದೆ .
ಅದಕ್ಕೂ ಮೊದಲೆ ಬಸ್ಸಿನ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.‘ಅಂಬಾರಿ ಉತ್ಸವ’ ಐಷಾರಾಮಿ ವರ್ಗದ ಬಸ್‌ಗಳು ಒಂದೊಂದೆ ಕೆಎಸ್‌ಆರ್‌ಟಿಸಿ ತೆಕ್ಕೆಗೆ ಸೇರುತ್ತಿದ್ದು, ಫೆಬ್ರವರಿ 21ರೊಳಗೆ 20 ಬಸ್‌ಗಳೂ ಮೈಸೂರು ವಿಭಾಗಕ್ಕೆ ಸೇರಿಕೊಳ್ಳಲಿವೆ.
“ಕೆಎಸ್‌ಆರ್‌ಟಿಸಿಯು ಪ್ರಯಾಣದ ಅನುಕೂಲಕ್ಕಾಗಿ ಹಲವು ಐಷಾರಾಮಿ ಬಸ್‌ಗಳನ್ನು ಪರಿಚಯಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂಬಾರಿ, ಕ್ಲಬ್ ಕ್ಲಾಸ್ ಸ್ಲೀಪರ್ಸ್ ಮತ್ತು ಐರಾವತದಂತಹ ಬಸ್‌ಗಳಿಗೆ ಜನರು ಹೆಚ್ಚು ಆದ್ಯತೆ ನೀಡುತ್ತಿದ್ದು, ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್‌ಗಳಲ್ಲಿ ಅಪಾಯ ಮುಕ್ತ ಮತ್ತು ಆರಾಮದಾಯಕ ಪ್ರಯಾಣವನ್ನು ಆರಿಸಿಕೊಳ್ಳುತ್ತಿದ್ದಾರೆ” ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದ್ದಾರೆ. ‘ ಕೆಎಸ್‌ಆರ್‌ಟಿಸಿಯ ‘ಅಂಬಾರಿ ಉತ್ಸವ’ ಬಸ್‌ಗಳನ್ನು ಪರಿಚಯಿಸಲಿದೆ, ಇದು ಸೂಪರ್ ಐಷಾರಾಮಿ ಮತ್ತು ವಿಶೇಷ ಪ್ರಯಾಣದ ಅನುಭವವನ್ನು ನೀಡುತ್ತದೆ. ನಾವು ಅಂತಹ 20 ಬಸ್‌ಗಳ ಸೇವೆಗಳನ್ನು ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಪ್ರಾರಂಭಿಸುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.
