ಚಾಮರಾಜನಗರ :
ಕಳೆದ ಮೇ 8ರಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ಸೆರೆ ಹಿಡಿದಿದ್ದ ಆನೆಯ ದಂತ ಕತ್ತರಿಸಿ ಕಾಡಿಗೆ ಬಿಟ್ಟ ಪ್ರಯೋಗ ಯಶಸ್ಸು ಕಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆಯು ಕೂಡು ದಂತವನ್ನು ಕತ್ತರಿಸಿ ಆನೆಗೆ ಯಶಸ್ವಿ ಚಿಕಿತ್ಸೆ ಮಾಡಿದೆ. ಈ ಮೂಲಕ ಕಾಡಾನೆಗೆ ನೈಸರ್ಗಿಕವಾಗಿ ಆಹಾರ ಸೇವನೆಗೆ ಅನುವು ಮಾಡಿಕೊಟ್ಟಿದೆ.