ಮೈಸೂರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಈ ಹೊಸ ಟೋಲ್ ದರವು ಏಪ್ರಿಲ್ 1 ದಿಂದ ಜಾರಿ ಆಗಲಿದೆ. ಟೋಲ್ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡುತ್ತಿದ್ದು, ಇದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೊಸ ಟೋಲ್ ದರದ ವಿವರ ಇಲ್ಲಿದೆ
1. ಕಾರು, ವ್ಯಾನ್, ಜೀಪ್: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿದೆ.
2. ಟ್ರಕ್, ಬಸ್, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿದೆ.
3. ಲಘು ವಾಹನಗಳು, ಮಿನಿ ಬಸ್: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿದೆ.
4. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂಪಾಯಿ, ದ್ವಿಮುಖ ಸಂಚಾರಕ್ಕೆ 925 ರೂಪಾಯಿ ಆಗಿದೆ. ಮೊದಲ ಬಾರಿ 115 ರೂಪಾಯಿ ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂಪಾಯಿ ಹೆಚ್ಚಳ ಮಾಡಲಾಗಿದೆ.
5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
6. ಇನ್ನು 7 ಅಥವಾ ಎಕ್ಸೆಲ್ ವಾಹನಗಳಿಗೆ 1,080 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,620 ರೂಪಾಯಿ ಆಗಿದೆ. ಮೊದಲ ಬಾರಿ 200 ರೂಪಾಯಿ ಎರಡನೇ ಬಾರಿ 305 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಮೊದಲೇ ಟೋಲ್ ಆರಂಭವಾದಾಗಿನಿಂದ ವಾಹನ ಸವಾರರು ಟೋಲ್ ಸಿಬ್ಬಂದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೀಗ ಮತ್ತೆ ಟೋಲ್ ಶುಲ್ಕವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರ ಪ್ರತಿಕ್ರಿಯೆ ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
