ಸಿಂಹ ಪ್ರಿಯಾ ಮನಗೆ ಬಂದ ನೂತನ ಅತಿಥಿ ಎಂಟ್ರಿ…!

ಬೆಂಗಳೂರು : 

     ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಂದಲ್ಲಾ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಈ ಸ್ಟಾರ್‌ ದಂಪತಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಸಿಂಹ-ಪ್ರಿಯಾ ಮನೆಯಲ್ಲಿ ಸಂತೋಷ ಮನೆ ಮಾಡಿದೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹೊಸ ಐಷಾರಾಮಿ ಕಾರು ಖರೀದಿಸಿದ್ದು, ತಮ್ಮ ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಇತ್ತಿಚಿಗೆ ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಖರೀದಿಸಿದ್ದು, ತಮ್ಮ ಮನೆಗೆ ಹೊಸ ಅತಿಥಿಯ ಆಗಮನದ ಸವಿಯಾದ ಕ್ಷಣವನ್ನು ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕುಟುಂಬಸ್ಥರು ಹಾಗೂ ಆಪ್ತರು ಕೂಡ ಇದ್ದು, ಹಿರಿಯರ ಆಶೀರ್ವಾದ ಪಡೆದು ಈ ದಂಪತಿ ಹೊಸ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

     ಈ ಸ್ಟಾರ್‌ ದಂಪತಿ ಹೊಸ ಕಾರು ಖರೀದಿಸುವ ಈ ಸುಂದರ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಲು ಶೋ ರೂಮ್‌ನಲ್ಲೂ ಶುಭಾಶಯ ಕೋರಿ ಅಲಂಕರಿಸಲಾಗಿತ್ತು. ಮೊದಲು ತಮ್ಮ ಹಳೆಯ ಕಾರಿನಲ್ಲಿ ಬಂದಿಳಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾಗೆ ಆಪ್ತರು ಶುಭಕೋರಿದ್ದಾರೆ. ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ವಸಿಷ್ಠ ಸಿಂಹ ದಂಪತಿ ಪಡೆದುಕೊಂಡಿದ್ದಾರೆ. ವಿಡಿಯೋದಲ್ಲಿ ಹೊಸ ಕಾರಿನ ವಿವರಣೆಯನ್ನು ಸಹ ನೀಡಿದ್ದಾರೆ. ಸದ್ಯ ಹೊಸ ಕಾರು ಖರೀದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಸಿಂಹ-ಪ್ರಿಯಾ ಜೋಡಿಗೆ ಅಭಿಮಾನಿಗಳು ಶುಭಾಶಯಕೋರಿದ್ದಾರೆ.

     ಇನ್ನು ಈ ಕಾರಿನ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾರಿನ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದ್ದು, ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯ ಹೊಸ ಕಾರಿನ ಚಿಕ್ಕದಾದ ವಿವರಣೆ ಇಲ್ಲಿದೆ. ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಇದಾಗಿದ್ದು, ನೋಡಲು ಸಖತ್‌ ಐಷಾರಾಮಿ ಆಗಿದೆ. ಸದ್ಯ ಬೆಂಗಳೂರಿನಲ್ಲಿ ಈ ಕಾರಿನ ಬೆಲೆ 1.20-1.40 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದರಲ್ಲಿ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್​ಮೀಷನ್​ನ ಈ ಕಾರು ಹೊಂದಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap