ಜೈಪುರ ದಂಪತಿಯ ಸಾವಿಗೆ ಹೊಸ ಟ್ವಿಸ್ಟ್‌….!

ಜೈಪುರ:

    ರಾಜಸ್ಥಾನದ ದಾದುದಯಲ್ ನಗರದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ 40 ವರ್ಷದ ಬ್ಯಾಂಕ್ ಮ್ಯಾನೇಜರ್ ಹಾಗೂ 36 ವರ್ಷದ ಪತ್ನಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರು ಸಾವನ್ನಪ್ಪಿದ ಬಳಿಕ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಜಗಳವಾಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ಶುಕ್ರವಾರ ಲಭಿಸಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ರೀತಿಯಲ್ಲಿ ಕಾಣಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಮೃತರನ್ನು ಧರ್ಮೇಂದ್ರ ಚೌಧರಿ ಮತ್ತು ಅವರ ಪತ್ನಿ ಸುಮನ್ ಎಂದು ಗುರುತಿಸಲಾಗಿದೆ.

    ಧರ್ಮೇಂದ್ರ ಚೌಧರಿ ಮತ್ತು ಅವರ ಪತ್ನಿ ಸುಮನ್ ಗುರುವಾರ ರಾತ್ರಿ 10:56 ರ ಸುಮಾರಿಗೆ ಒಟ್ಟಿಗೆ ತಮ್ಮ ಅಪಾರ್ಟ್ಮೆಂಟ್ ಪ್ರವೇಶಿಸುತ್ತಿರುವುದು ಕೊನೆಯ ಬಾರಿ ಕಂಡುಬಂದಿದೆ. ಕೆಲವು ಗಂಟೆಗಳ ಹಿಂದೆ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರ ನಡುವೆ ಭಾರೀ ಜಗಳವಾಗಿತ್ತು. ಧರ್ಮೇಂದ್ರ ತನ್ನ ಕಾರಿನಲ್ಲಿ ಹೊರಡುವುದನ್ನು ಸುಮನ್ ತಡೆಯಲು ಕಾಣಿಸಿದೆ. ನಂತರ ಕೆಲ ಹೊತ್ತು ಅವರಿಬ್ಬರು ಮಾತನಾಡಿದ್ದಾರೆ. ಬಳಿಕ ಸುಮನ್‌, ಧರ್ಮೇಂದ್ರ ಅವರ ಭುಜದ ಮೇಲೆ ಒರಗಿ ಅಳುತ್ತಿದ್ದಳು. ನಂತರ, ಮತ್ತೊಂದು ಕ್ಲಿಪ್‌ನಲ್ಲಿ ಧರ್ಮೇಂದ್ರ ಸುಮನ್‌ ಅವರನ್ನು ತಳ್ಳುತ್ತಿರುವುದು ಕಂಡು ಬಂದಿದೆ.

   ಧರ್ಮೇಂದ್ರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಸುಮನ್ ನೆಲದ ಮೇಲೆ ನಿರ್ಜೀವವಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಸಿಸಿಟಿವಿ ಪರಿಶೀಲನೆಯಲ್ಲಿ ಮನೆಗೆ ಯಾರೂ ಬಂದಿಲ್ಲ ಎಂದು ಧೃಡಪಟ್ಟಿದೆ. ಧಮೇಂದ್ರ ಕೆಲಸಕ್ಕೂ ತೆರಳಿರಲಿಲ್ಲ ಹಾಗೂ ಫೋನ್‌ಗೂ ಸಿಗುತ್ತಿರಲಿಲ್ಲ. ಪರಿಶೀಲನೆ ನಡೆಸಿದಾಗ ಅವರ ಶವ ಪತ್ತೆಯಾಗಿದೆ. ತನಿಖಾಧಿಕಾರಿಗಳು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಿದ್ದರೂ, ಶಂಕಿತ ವಿವಾಹೇತರ ಸಂಬಂಧ ಸೇರಿದಂತೆ ಸಂಭಾವ್ಯ ವೈವಾಹಿಕ ಕಲಹದ ಬಗ್ಗೆಯೂ ಅವರು ತನಿಖೆ ನಡೆಸುತ್ತಿದ್ದಾರೆ. ನೆರೆಹೊರೆಯವರು ಮತ್ತು ಪರಿಚಯಸ್ಥರು ದಂಪತಿ ಇತ್ತೀಚೆಗೆ ಫ್ಲಾಟ್ ಖರೀದಿಸಿದ್ದಾರೆ ಮತ್ತು ಆರ್ಥಿಕವಾಗಿ ಸ್ಥಿರವಾಗಿದ್ದಾರೆ ಎಂದು ಹೇಳಿದರು. ಧರ್ಮೇಂದ್ರ ಖಾಸಗಿ ಬ್ಯಾಂಕಿನ ವಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸುಮನ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ವರದಿಯಾಗಿದೆ. 

   ಸುಮನ್ ತಂದೆ ಅಜಯ್ ಸಿಂಗ್, ತಮ್ಮ ಮಗಳ ದೇಹದ ಮೇಲೆ ಗಾಯದ ಗುರುತುಗಳು ಗೋಚರಿಸುತ್ತಿವೆ ಎಂದು ಆರೋಪಿಸಿ, ಇದು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. “ನಮಗೆ ತಿಳಿದಿರುವಂತೆ ಯಾವುದೇ ವೈವಾಹಿಕ ಕಲಹ ಇರಲಿಲ್ಲ. ಅಧಿಕಾರಿಗಳು ಇದು ಕೊಲೆಯೇ ಎಂದು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ. ದಂಪತಿಯ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

Recent Articles

spot_img

Related Stories

Share via
Copy link