ಸಂತ್ರಸ್ತ ವ್ಯಕ್ತಿ ಸಲ್ಲಿಸಿರುವ ದೂರಿನ ಪ್ರಕಾರ ಆ ವ್ಯಕ್ತಿಗೆ ಸೆ.12 ರಂದು ವಿಡಿಯೋ ಕರೆ ಬಂದಿತ್ತು. ಕರೆಯಲ್ಲಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡ ನಿಮ್ಮ ಮೊಬೈಲ್ ನಂಬರ್ ನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಬೆದರಿಸಿದ್ದಾರೆ. ಅಷ್ಟೇ ಅಲ್ಲದೇ 9ನ್ನು ಒತ್ತುವಂತೆ ನನ್ನನ್ನು ಕೇಳಿದರು. ನಾನು 9ನ್ನು ಡಯಲ್ ಮಾಡಿದಾಗ, ನನ್ನ ಕರೆಯನ್ನು ಡೈವರ್ಟ್ ಮಾಡಲಾಯಿತು.” ಎಂದು ದೂರುದಾರರು ಹೇಳಿದ್ದಾರೆ.
ನಂತರ ನನ್ನ ಕರೆಯನ್ನು ಮುಂಬೈ ಮೂಲದ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಸಂಪರ್ಕಿಸಲಾಯಿತು ಮತ್ತು ಆ ಅಧಿಕಾರಿ, ಸಂತ್ರಸ್ತ ವ್ಯಕ್ತಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಯನ್ನು ತೆರೆಯಲು ಬಳಸಲಾಗಿದೆ ಆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಈ ಬಳಿಕ ನನಗೆ ಕರೆ ಮಾಡಿದವರು ಸಿಬಿಐ ಅಧಿಕಾರಿ ಎಂದು ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿಸಿದ್ದರು. ಬಳಿಕ ನಕಲಿ “ಕೋರ್ಟ್” ಕಲಾಪಕ್ಕೆ ಆನ್ ಲೈನ್ ಮೂಲಕ ಹಾಜರು ಪಡಿಸಿ, ಅಲ್ಲಿ ವಿಚಾರಣೆಯ ಸಮಯದಲ್ಲಿ ಎಫ್ಐಆರ್ ಪ್ರಕಾರ, ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆ ಮತ್ತು ಮ್ಯೂಚುವಲ್ ಫಂಡ್ಗಳು ಸೇರಿದಂತೆ ಎಲ್ಲಾ ವ್ಯಕ್ತಿಯ ಹಣವನ್ನು ವರ್ಗಾಯಿಸಲು “ಆದೇಶ” ಪ್ರಕಟಿಸಲಾಯಿತು.ಒತ್ತಡದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ವಹಿವಾಟುಗಳಲ್ಲಿ 59 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದೆ ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾರೆ. ಬಳಿಕ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಇದು ವಂಚನೆ ಎಂದು ತಿಳಿದುಬಂದಿದೆ.