New year : ಮೋಜುಪ್ರಿಯರಿಗೆ ಸಿಹಿ ಸುದ್ಧಿ!!!

ಬೆಂಗಳೂರು:

      2019 ನ್ನು ವಿಶೇಷವಾಗಿ ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರಿನ ಜನ ಕಾತರರಾಗಿದ್ದಾರೆ. ನ್ಯೂ ಇಯರ್ ಸೆಲೆಬ್ರೇಶನ್ ಸಿದ್ಧತೆಯಲ್ಲಿ ಇರುವವರಿಗೆ ಖುಷಿಯ ವಿಚಾರವೊಂದು ಇಲ್ಲಿದೆ.

      ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಗಳ ಅವಧಿಯನ್ನು ಡಿಸೆಂಬರ್ 31 ರಂದು ರಾತ್ರಿ 2 ಗಂಟೆಯವರೆಗೆ ವಿಸ್ತರಿಸುವ ಮೂಲಕ ಮೋಜುಪ್ರಿಯರಿಗೆ ಹೊಸ ಆಫರ್ ವೊಂದನ್ನು ನೀಡಿದಂತಾಗಿದೆ.

Related image

     ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರೇವ್ ಪಾರ್ಟಿ, ಮಾದಕ ವಸ್ತುಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

      ಪ್ರಮುಖ ರಸ್ತೆಗಳು ಮತ್ತು ಫ್ಲೈ ಓವರ್ ಗಳ ಮೇಲೆ ಅಂದು ಸಂಚಾರ ನಿಷೇಧಿಸಲಾಗಿದೆ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವವರು, ಕಿಡಿಗೇಡಿ ಕೃತ್ಯ ಎಸಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

      5 ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳು, 50 ಕೆ.ಎಸ್.ಆರ್.ಪಿ. ತುಕಡಿ, 30 ಸಿ.ಎ.ಆರ್. ತುಕಡಿ, 1200 ಹೋಂ ಗಾರ್ಡ್ಸ್, 250 ಮಹಿಳಾ ಪೊಲೀಸರು ಸೇರಿದಂತೆ ಸುಮಾರು 11 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap