ಮುಸ್ಲಿಮರು ನಮಾಜ್​ಗೆ ರಸ್ತೆ ತಡೆದರೆ, ಹನುಮಾನ್​ ಚಾಲೀಸಾ ಪಠಿಸೋಕೆ ನಾವು ತಡೆಯುತ್ತೇವೆ…!

ನವದೆಹಲಿ:

    ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುತ್ತಿದ್ದಂತೆ  ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಪೈಪೋಟಿ ಆರಂಭವಾಗಿದೆ.  ಈ ಪೈಪೋಟಿ ಮತ್ತಷ್ಟು ತುರುಸುಗೊಂಡಿದೆ. ಇದೀಗ ಇದು ರಸ್ತೆಯಲ್ಲೇ ಕುಳಿತು ಹನುಮಾನ್​ ಚಾಲೀಸಾ ಪಠಿಸುವ ಮೂಲಕ ಜನ, ವಾಹನ ಸಂಚಾರಕ್ಕೆ ಅಡ್ಡಿಪಡಿಸುವವರೆಗೂ ವಿಸ್ತರಿಸಿದೆ.

    ಹೌರಾ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿರುವ ಹನುಮಾನ್​ ದೇಗುಲಗಳಿಗೆ ಪ್ರತಿ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಕಾರ್ಯರ್ಕತರು, ಅವುಗಳ ಎದುರಿನ ರಸ್ತೆಯಲ್ಲೇ ಕುಳಿತು ಹನುಮಾನ್​ ಚಾಲೀಸಾ ಪಠಿಸುತ್ತಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿರುವ ಭಾರತೀಯ ಜನತಾಪಕ್ಷದ ಯುವ ಮೋರ್ಚಾದ ಹೌರಾ ಜಿಲ್ಲಾಧ್ಯಕ್ಷ ಒ.ಪಿ. ಸಿಂಗ್​, ಸಿಎಂ ಮಮತಾ ಬ್ಯಾನರ್ಜಿ ಅವರ ಆಡಳಿತಕಾಲದಲ್ಲಿ ಶುಕ್ರವಾರ ನಮಾಜ್​ ಮಾಡಲು ಮುಸ್ಲಿಮರು ಗ್ರಾಂಡ್​ ಟ್ರಂಕ್​ ರೋಡ್​ ಸೇರಿ ಹಲವು ಪ್ರಮುಖ ರಸ್ತೆಗಳನ್ನು ಬಳಸಿಕೊಂಡು, ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ಕಚೇರಿ ತಲುಪಲು ಜನರಿಗೆ ತೊಂದರೆಯಾಗುತ್ತಿದೆ. ಈ ಪದ್ಧತಿ ಎಲ್ಲಿಯವರೆಗೂ ಮುಂದುವರಿಯುತ್ತದೋ, ಅಲ್ಲಿಯವರೆಗೆ ನಾವು ಕೂಡ ಪ್ರತಿ ಮಂಗಳವಾರ ಪ್ರಮುಖ ರಸ್ತೆಗಳಲ್ಲಿ ಕುಳಿತು ಹನುಮಾನ್​ ಚಾಲೀಸಾ ಪಠಿಸಿ, ಜನ, ವಾಹನ ಸಂಚಾರಕ್ಕೆ ಅಡ್ಡಿಪಡಿಸಲಿದ್ದೇವೆ ಎಂದು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap