ಬೆಂಗಳೂರು:
ಚುನಾವಣಾ ಆಯೋಗದವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಪರ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುವ ವೇಳೆ ಚುನಾವಣಾಧಿಕಾರಿಗಳು ಅವರ ಕಾರನ್ನು ತಡೆಹಿಡಿದು ಮಾಮೂಲಾಗಿ ತಪಾಸಣೆ ನಡೆಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಸಿಎಂ ಕಿರುಕುಳದ ಆರೋಪ ಮಾಡಿದ್ದಾರೆ. ಚುನಾವಣಾಧಿಕಾರಿಗಳು ಬೇಕೆಂದೇ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಇದರಿಂದ ಅವರಿಗೆ ಏನು ಸಿಗುತ್ತದೋ ನನಗೆ ಗೊತ್ತಿಲ್ಲ. ಆದರೂ ಪದೇ ಪದೇ ನನ್ನನ್ನೇ ಗುರಿಯಾಗಿಸಿ ಪರಿಶೀಲನೆ, ದಾಳಿ ಮಾಡಲಾಗುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ.
ಆದರೆ ಚುನಾವಣಾಧಿಕಾರಿಗಳು ಇದನ್ನೆಲ್ಲಾ ತಳ್ಳಿ ಹಾಕಿದ್ದು, ಹಾಸನ ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವಂತೆ ಸಿಎಂ ವಾಹನವನ್ನೂ ತಪಾಸಣೆ ನಡೆಸಲಾಗಿದೆಯಷ್ಟೇ. ಬದಲಾಗಿ ಯಾವುದೇ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ