ಅಮರನಾಥ್ ಯಾತ್ರೆಗಾಗಿ 60 ಸಾವಿರ ರಕ್ಷಣಾ ಸಿಬ್ಬಂದಿ ನಿಯೋಜನೆ

ನವದೆಹಲಿ: 

   ಅಮರನಾಥ ತೀರ್ಥಯಾತ್ರೆಗೆ ಬಲ್ಟಾಲ್ ಮತ್ತು ಪಹಲ್ಗಮ್ ಮಾರ್ಗಗಳಲ್ಲಿ ಸುಮಾರು 60,000 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಭಾನುವಾರದಂದು ಜಮ್ಮು ಶಿಬಿರದಲ್ಲಿ ಪೂಜೆಯ ನಂತರ ಮೊದಲ ಬ್ಯಾಚ್ ಭಕ್ತರರಿಗೆ ಯಾತ್ರೆಯ ಅನುವು ಮಾಡಿಕೊಡಲಾಗಿದೆ. ಸುಮಾರು 3,880 ಅಡಿ ಎತ್ತರದಲ್ಲಿರುವ ಈ ಪವಿತ್ರ ಗುಹೆಗೆ ಹೋಗುವ ಎರಡೂ ಮಾರ್ಗಗಳನ್ನು ತೆರವುಗೊಳಿಸಲಾಗಿದೆ ಮತ್ತು ಭದ್ರತಾ ರಕ್ಷಣೆ ನೀಡುವ ಜವಾಬ್ದಾರಿಯನ್ನು ಹೆಚ್ಚಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜೆ & ಕೆ ಪೊಲೀಸರಿಗೆ ವಹಿಸಲಾಗಿದೆ.

 

ಈಗ ಯಾತ್ರೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಆರ್‌ಪಿಎಫ್‌ನ ಐಜಿ ರವೀದೀಪ್ ಸಹೈ” ಈ ಅಮರನಾಥ ಯಾತ್ರೆ ನಮಗೆ ದೊಡ್ಡ ಕಾರ್ಯಕ್ರಮವಾಗಿದೆ. ಆದ್ದರಿಂದ ಈಗ ಪೂರ್ಣ ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ. ಭಾರತೀಯ ಸೇನೆ, ಬಿಎಸ್ಎಫ್, ಪೊಲೀಸ್ ಮತ್ತು ಸಿಆರ್ಪಿಎಫ್ ಗೆ ಈಗ ಭದ್ರತೆ ಜವಾಬ್ದಾರಿಯನ್ನು ಒದಗಿಸಲಾಗಿದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ನಾವು ನೋಡಿಕೊಳ್ಳುತ್ತೇವೆ ‘ ಎಂದು ತಿಳಿಸಿದ್ದಾರೆ. ಈ ವರ್ಷ ಹೆಚ್ಚುವರಿಯಾಗಿ 40,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅನುಕೂಲತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ಸಹಾಯವನ್ನು ಸಹ ಪಡೆದುಕೊಳ್ಳಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap