ಪತ್ರಿಕೆಗಳು ಸಮಾಜದ ಕನ್ನಡಿಯಾಗಬೇಕು :ಜೆ.ಸಿ.ಮಾಧುಸ್ವಾಮಿ

ತುಮಕೂರು

    ಪತ್ರಿಕೆಗಳು ಸಮಾಜದ ಕನ್ನಡಿಯಾಗಬೇಕು. ಕನ್ನಡಿಯಂತೆ ನೈಜ ಸುದ್ದಿಗಳನ್ನು ಜನರ ಮುಂದಿರಿಸಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನವೀಕೃತ ಪತ್ರಿಕಾ ಭವನವನ್ನು ಲೋಕಾರ್ಪಣೆಗೊಳಿಸಿ ಈ ಸಾಲಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಾಧಕ ಪತ್ರಕರ್ತರಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

     ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ಕಾರ್ಯಕರ್ತರು, ಪತ್ರಿಕಾ ವರದಿಗಳನ್ನು ಆಧರಿಸಬೇಕು ಎಂಬ ಮಾತನ್ನು ರಾಮಕೃಷ್ಣ ಹೆಗಡೆ ಯಾವಾಗಲು ಹೇಳುತ್ತಿದ್ದರು. ಇದು ಪತ್ರಿಕಾ ವರದಿಗಳು ಮತ್ತು ಸಂಪಾದಕೀಯದ ಮಹತ್ವವನ್ನು ಎತ್ತಿತೋರುತ್ತದೆ. ಮಹಾತ್ಮಗಾಂಧೀಜಿ, ಅಂಬೇಡ್ಕರ್ ಅವರು ಮಹಾನ್ ಪತ್ರಕರ್ತರೇ ಆಗಿದ್ದವರು. ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕಾದರೆ ಆಡಳಿತಗಾರರು ಮಾಧ್ಯಮಗಳ ಟೀಕೆಯನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕು. ಜಾಹೀರಾತುದಾರರ ಪರವಾದ ವರದಿಗಳೇ ಹೆಚ್ಚಾಗಬಾರದು ಎಂಬ ನೈತಿಕ ಪ್ರಜ್ಞೆ ಪತ್ರಕರ್ತನಲ್ಲಿ ಜಾಗೃತವಾಗಿರಬೇಕು ಎಂದರು.

     ಅತ್ಯಂತ ಸಂತೋಷದಿಂದ ನವೀಕೃತ ಪತ್ರಿಕಾ ಭವನ ಲೋಕಾರ್ಪಣೆಗೊಳಿಸಿದ್ದು, ಪತ್ರಕರ್ತರಿಗೆ ಸದ್ಬಳಕೆಯಾಗಲಿ ಎಂದು ಸಚಿವರು ಆಶಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಅನುದಾನದ ಭರವಸೆ:

     ಸಂಸದ ಜಿ.ಎಸ್.ಬಸವರಾಜ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಪತ್ರಿಕೋದ್ಯಮ, ಪತ್ರಕರ್ತ ವೃತ್ತಿ ಅತ್ಯಂತ ಗೌರವ, ಶ್ರೇಷ್ಠ ಇತಿಹಾಸವಿದೆ. ಗಾಂಧೀಜಿ, ನೆಹರು ಅವರು ಸಹ ಪತ್ರಕರ್ತರಾಗಿ ರಾಷ್ಟç ನಿರ್ಮಾಣದಲ್ಲಿ ಹೆಸರು ಮಾಡಿದವರು. ಇಂದು ವಿಷಯಾಧಾರಿತ, ತನಿಖೆ ಆಧರಿತ ಪತ್ರಿಕೋದ್ಯಮ ಕ್ಷೀಣಿಸುತ್ತಿದೆ. ಸುದ್ದಿಗೋಷ್ಠಿ ನಡೆಸುವುದೇ ಕಷ್ಟವೆನ್ನುವ ಮಟ್ಟಿಗೆ ಪರಿಸ್ಥಿತಿ ವಿಷಮವಾಗುತ್ತಿದೆ ಎಂದು ಹೇಳಿ ಪತ್ರಿಕಾ ಭವನದ ಎರಡನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸಂಸತ್ ಸದಸ್ಯರ ನಿಧಿಯಿಂದ 5 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
 

       ಸಮಾರಂಭದ ಸಾನಿಧ್ಯ ವಹಿಸಿದ್ದ ಸ್ವಾಮಿ ಜಪಾನಂದಜೀ ಆಶೀರ್ವಚನ ನೀಡಿ ಚುನಾವಣೆಯ ಗುಂಗಿನಲ್ಲಿ ಬೇಸಿಗೆಯ ಪರಿತಾಪದಲ್ಲಿ ಜನಸಾಮಾನ್ಯರು, ಮೂಕಪ್ರಾಣಿಗಳ ವೇದನೆ ಆಡಳಿತಕ್ಕೆ ಕೇಳಿಸದಂತಾಗಿದ್ದು, ಇಂತಹ ವಿಷಯಗಳ ಬಗ್ಗೆ ಮಾಧ್ಯಮಗಳು ಹೆಚ್ಚು ಫೋಕಸ್ ಮಾಡಬೇಕಿದೆ. ತುಮಕೂರಿನ ಸಿರಾದಲ್ಲಿ ಆಗುತ್ತಿರುವ ಗೋಶಾಲೆಯಲ್ಲಿ ಹಸುಗಳಿಗೆ ಮೇವು, ರೋಗದಿಂದ ಸಾಯುತ್ತಿರುವ ಪರಿಸ್ಥಿತಿ ಬಗ್ಗೆ ಪತ್ರಿಕೆಗಳು ಬೆಳಕು ಚೆಲ್ಲಿದ್ದು, ರಾಮಕೃಷ್ಣಾಶ್ರಮದ ಶಿಕ್ಷಣ, ಆರೋಗ್ಯ ಕ್ಷೇತ್ರದ ಸೇವೆಗೆ ಪತ್ರಿಕೆ, ಮಾಧ್ಯಮಗಳ ವರದಿಗಳೇ ಸ್ಫೂರ್ತಿಯಾಗಿವೆ ಸಮಾಜಕ್ಕೆ ಪತ್ರಿಕೆಗಳು ದಾರಿದೀಪ ಎಂದು ಹೇಳಿ ಅತ್ಯಂತ ಸವಾಲು ಕಷ್ಟದಲ್ಲಿ ಪತ್ರಿಕಾವೃತ್ತಿಯನ್ನು ಪತ್ರಕರ್ತರು ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಆದರೆ ಪತ್ರಿಕಾರಂಗಕ್ಕೆ ಹೊಸದಾಗಿ ಬರುವವರಿಗೆ ಸಂಘದಿಂದ ಬೇಸಿಕ್ ತರಬೇತಿ ಕಾರ್ಯಗಾರ ಏರ್ಪಡಿಸುವ ಅವಶ್ಯಕತೆ ಇದೆ ಎಂದರು.

    ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಡಿವಿಜಿ ಅವರು ಸ್ಥಾಪಿಸಿದ 90 ವರ್ಷ ಇತಿಹಾಸದ ಪತ್ರಕರ್ತರ ಸಂಘದ ಸಂಘಟಿತ ಹೋರಾಟದ ಫಲವಾಗಿ ಪತ್ರಕರ್ತರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು, ದೃಶ್ಯ ಮಾಧ್ಯಮ ಛಾಯಾಗ್ರಾಹಕರು ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದರು ಎಷ್ಟೋಮಂದಿ ಪ್ರಾಣವನ್ನೇ ಕಳೆದುಕೊಂಡು. ಸಂಘ ಸರ್ಕಾರ ಮತ್ತು ಪತ್ರಕರ್ತರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿದಕ್ಕೆ ಕುಟುಂಬಕ್ಕೆ ನೆರವು ಕೊಡಿಸಲು ಸಾಧ್ಯವಾಯಿತು.

     ಪತ್ರಿಕಾ ಭವನ ನವೀಕರಣದೊಂದಿಗೆ ತುಮಕೂರಿನ ಸಂಘ ಇನ್ನಷ್ಟು ಕ್ರಿಯಾಶೀಲವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಸಂಘದ ಕಾರ್ಯಚಟುವಟಿಕೆಗಳನ್ನು ಪ್ರಸ್ತಾಪಿಸಿ ಪತ್ರಿಕಾ ಭವನ ಉದ್ಘಾಟನೆ, ನವೀಕರಣಕ್ಕೆ ಸಹಕರಿಸಿದವರನ್ನು ಸ್ಮರಿಸಿದರು.

    ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಐಎಫ್‌ಡಬ್ಲೂö್ಯಜೆ ರಾಷ್ಟಿçÃಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹಾಗೂ ಶಿಕ್ಷಣ ತಜ್ಞ ಸಂಜಯಗೌಡ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇದೇ ವೇಳೆ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ರಾಷ್ಟಿçÃಯಮಂಡಳಿ ಸದಸ್ಯ ಶಾಂತರಾಜು, ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್ ಅವರು 50 ಸಾವಿರ ದೇಣಿಗೆ ಚೆಕ್ ನೀಡಿದರು.

      ಸನ್ಮಾನ: ಪ್ರಸಕ್ತ ಸಾಲಿನಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಹಿರಿಯ ಪತ್ರಕರ್ತರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಉಗಮಶ್ರೀನಿವಾಸ್, ತೋ.ಸಿ.ಕೃಷ್ಣಮೂರ್ತಿ, ಎಸ್.ಹರೀಶ್ ಆಚಾರ್ಯ, ರಂಗನಕೆರೆ ಮಹೇಶ್, ವಡ್ಡಗೆರೆ ಉಮಾಶಂಕರ್, ಆರ್. ನಾಗರಾಜ್, ಶಾಂತಿನಾಥ್ ಜೈನ್, ಇಮ್ರಾನುಲ್ಲ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಎಸ್.ಶಿವಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜೆಡಿಎಸ್ ನಗರ ಅಭ್ಯರ್ಥಿ ಎನ್.ಗೋವಿಂದರಾಜು, ಉದ್ಯಮಿ ಸ್ಫೂರ್ತಿ ಚಿದಾನಂದ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

     ಸಮಾರಂಭದ ಬಳಿಕ ಚಿ.ನಿ.ಪುರುಷೋತ್ತಮ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು.ಟಿ.ಇ.ರಘುರಾಂ ಆಡಳಿತ ವರದಿ, ಖಜಾಂಚಿ ದೇವಪ್ರಕಾಶ್ ಲೆಕ್ಕಪತ್ರ ವರದಿ ಮಂಡಿಸಿದರು. ರಾಜ್ಯಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ,  ಸದಸ್ಯರಾದ ಡಿ.ಎಂ.ಸತೀಶ್ ಶಾಂತರಾಜು, ಸಂಘದ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರುಗಳು, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡರು.

 

Recent Articles

spot_img

Related Stories

Share via
Copy link
Powered by Social Snap