ಪತ್ರಿಕೆ, ಮಾಧ್ಯಮಗಳು ನೊಂದವರ ಧ್ವನಿಯಾಗಿರಬೇಕು

ಬೆಂಗಳೂರು:

ಪ್ರಜಾಪ್ರಗತಿ ಬೆಂಗಳೂರು ಬ್ಯೂರೋ ಕಚೇರಿ ಉದ್ಘಾಟಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಹಾಲಿ- ಮಾಜಿ ಸಚಿವರು, ಶಾಸಕರು, ಗಣ್ಯರು, ಸಾಹಿತಿ, ಉದ್ಯಮಿಗಳು, ಅಧಿಕಾರಿಗಳಿಂದ ಶುಭ ಹಾರೈಕೆ

ಕಳೆದ 35 ವರ್ಷಗಳಿಂದ ಜನರ ಧ್ವನಿಯಾಗಿ ತುಮಕೂರಿನಿಂದ ಪ್ರಕಟವಾಗುತ್ತ ರಾಜ್ಯದ 8 ಜಿಲ್ಲೆಗಳಲ್ಲಿ ತನ್ನದೇ ಓದುಗ ವಲಯವನ್ನು ಹೊಂದಿರುವ ಎಸ್.ನಾಗಣ್ಣ ಅವರ ಸಂಪಾದಕತ್ವದ ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಸಾರ್ಥಕ 7 ವರ್ಷ ಪೂರೈಸಿ ಮುನ್ನೆಡೆಯುತ್ತಿರುವ ಪ್ರಗತಿ ಟಿವಿ ಪ್ರಗತಿಯ ಹೊಸ ದಾಪುಗಾಲನ್ನು ರಾಜಧಾನಿ ಬೆಂಗಳೂರಿನಲ್ಲಿರಿಸಿದ್ದು, ಬೆಂಗಳೂರು ಬ್ಯೂರೋ ಕಚೇರಿ ಗುರುವಾರ ಲೋಕಾರ್ಪಣೆಗೊಂಡಿತು,

ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಜಾಪ್ರಗತಿ ಮತ್ತು ಪ್ರಗತಿ ಟಿ.ವಿ ಬೆಂಗಳೂರು ಬ್ಯೂರೋ ಕಚೇರಿ ಉದ್ಘಾಟಿಸಿ ಮಾತನಾಡಿ ಪತ್ರಿಕೆ- ಮಾಧ್ಯಮಗಳು ನೊಂದವರ ಧ್ವನಿಯಾಗಿರಬೇಕು. ಈ ದಿಸೆಯಲ್ಲಿ ಪ್ರಜಾಪ್ರಗತಿ ಪ್ರಾದೇಶಿಕ ದಿನಪತ್ರಿಕೆ ಹಾಗೂ ಪ್ರಗತಿ ಟಿವಿ ಸಮಾಜದ ಅಶಕ್ತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಓದುಗ ವಲಯವನ್ನು ಹೊಂದಿದೆ.

ಪ್ರಸ್ತುತ ರಾಜ್ಯ ರಾಜಧಾನಿಯಲ್ಲಿ ಪತ್ರಿಕಾ ಕಚೇರಿ ತೆರೆದಿದ್ದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಆವೃತ್ತಿ ಹೊರತರುತ್ತಿರುವುದು ಸಂತಸದ ಸಂಗತಿ. ಬೆಂಗಳೂರು ಕಚೇರಿಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜನರ ಪ್ರಗತಿಗೋಸ್ಕರ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಗತಿ ರಾಜಧಾನಿಗೆ ಪ್ರವೇಶಿಸಿರುವುದನ್ನು ತುಂಬು ಹೃದಯದಿಂದ ಸ್ವಾಗತಿಸುವೆ. ರಾಜಧಾನಿ ಜನರ ನಾಡಿಮಿಡಿತಕ್ಕೆ ಪತ್ರಿಕೆ ಸ್ಪಂದಿಸಲಿ ಎಂದು ಆಶಿಸಿ ಸಂಪಾದಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರದ ಗಣ್ಯರ ಆಗಮನ, ಶುಭ ಹಾರೈಕೆ:

ಪ್ರಜಾಪ್ರಗತಿ ಬೆಂಗಳೂರು ಬ್ಯೂರೋ ಕಚೇರಿ ಲೋಕಾರ್ಪಣೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಲೀಲಾದೇವಿ ಆರ್.ಪ್ರಸಾದ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಕೆ.ಎ. ತಿಪ್ಪೇಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್, ಡಿ.ಎಸ್.ವೀರಯ್ಯ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್,

ಶೇಷಾದ್ರಿಪುರಂ ಶಿಕ್ಷಣದತ್ತಿಯ ಅಧ್ಯಕ್ಷ ವೂಡೆ.ಪಿ.ಕೃಷ್ಣ, ಶಾಶ್ವತ ಹಿಂದುಳಿವ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ, ಪವಾಡ ಭಂಜಕ ಡಾ.ಹುಲಿಕಲ್ ನಟರಾಜ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು,

ಮಾಜಿ ಅಧ್ಯಕ್ಷ ಗಂಗಾಧರ್ ಮೊದಲಿಯಾರ್, ಡೆಲ್ಲಿ ಪ್ರೆಸ್‍ನ ಮಾಲೀಕರಾದ ಪರೇಶ್‍ನಾಥ್, ಹಿರಿಯ ಪತ್ರಕರ್ತ ಭಾಸ್ಕರ್, ಸಾಂಬಶಿವರೆಡ್ಡಿ, ಆಡ್6 ಸಂಸ್ಥೆಯ ಮುಖ್ಯಸ್ಥ ಸುಧಾಕರ್,

ಇನ್‍ಸೈಟ್ ಐಎಎಸ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ವಿನಯ್‍ಕುಮಾರ್.ಬಿ, ಗ್ರಂಥಾಲಯ ಇಲಾಖೆ ರಾಜ್ಯ ನಿರ್ದೇಶಕ ಡಾ.ಸತೀಶ್‍ಕುಮಾರ್ ಹೊಸಮನಿ, ಕೆಎಎಸ್ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಮಲಬಾರ್ ಗೋಲ್ಡ್ ನಿರ್ದೇಶಕರಾದ ವಿವೇಕ್,

ಜಾವೀದ್, ಚಿತ್ರ ನಿರ್ದೇಶಕ ಶಶಾಂಕ್, ಚಿತ್ರನಟ ಅನೂಪ್‍ರೇವಣ್ಣ, ರೆಡ್‍ಕ್ರಾಸ್ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ರಾಜ್ಯ ಖಜಾಂಚಿ ಆನಂದ್ ಜಿಗಜಿನ್ನಿ, ಚಂದ್ರಶೇಖರ್,

ಹೆಮ್ಮಿಗೆ ಮೋಹನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಠೆಮಠ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಪದ್ಮರಾಜ್‍ಜೈನ್, ವರೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಯ್ಯ,

ಸಹಾಯಕ ಪ್ರಾಧ್ಯಾಪಕ ಯೋಗೀಶ್, ಉಪನ್ಯಾಸಕರಾದ ಮಹಾಲಿಂಗೇಶ್, ಇತರೆ ಗಣ್ಯರು, ಪ್ರಮುಖರು ಆಗಮಿಸಿ ಸಂಪಾದಕರಾದ ಎಸ್.ನಾಗಣ್ಣ, ಸಹಸಂಪಾದಕರಾದ ಟಿ.ಎನ್.ಮಧುಕರ್ ಹಾಗೂ ಸಿಇಓ ಟಿ.ಎನ್.ಶಿಲ್ಪಶ್ರೀ ಅವರಿಗೆ ಶುಭಹಾರೈಸಿದರು.

ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯಲಿ

ಮುಂದೆ ಪತ್ರಿಕೆ ಇದೇ ರೀತಿ ವಿಸ್ತರಿಸಿ ರಾಜ್ಯದುದ್ದಗಲಕ್ಕೂ ಪಸರಿಸಲಿ. ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯಲಿ. ಈ ನಿಟ್ಟಿನಲ್ಲಿ ಶ್ರಮಹಾಕುತ್ತಿರುವ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ ಹಾಗೂ ಸಹ ಸಂಪಾದಕರಾದ ಟಿ.ಎನ್.ಮಧುಕರ್, ಟಿವಿ ಮುಖ್ಯಸ್ಥೆ ಶಿಲ್ಪಶ್ರೀ ಹಾಗೂ ಎಲ್ಲಾ ಪತ್ರಿಕಾ ಸಿಬ್ಬಂದಿ ವರ್ಗದವರಿಗೂ ಶುಭ ಹಾರೈಸುತ್ತೇನೆ.

-ಸಿದ್ದರಾಮಯ್ಯ, ವಿಪಕ್ಷ ನಾಯಕರು.

ನಮ್ಮ ತುಮಕೂರು ಜಿಲ್ಲೆಯ ಪ್ರಜಾಪ್ರಗತಿ ಪತ್ರಿಕೆ 8ಜಿಲ್ಲೆಗಳಲ್ಲಿ ಪ್ರಸಾರವಾಗುತ್ತಾ ರಾಜಧಾನಿಯಲ್ಲಿ ಕಚೇರಿ ತೆರೆದು, ಪತ್ರಿಕೆ ಹಾಗೂ ಟಿವಿಯ ಮೂಲಕ ಜನಸಾಮಾನ್ಯರಿಗೆ ಧ್ವನಿಯಾಗಲು ಹೊರಟಿರುವುದು ಒಳ್ಳೆಯ ಬೆಳವಣಿಗೆ. ಜನರ ಧ್ವನಿಯಾಗಿ ಸರಕಾರಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುವೆ.

-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap