ನ್ಯೂಯಾರ್ಕ್‌ ಬೀದಿಯಲ್ಲಿ ಮ್ಯಾಕ್ರನ್‌ ಹೈಡ್ರಾಮಾ…..!

ನ್ಯೂಯಾರ್ಕ್: 

   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮತ್ತು ಅವರ ಬೆಂಗಾವಲು ಪಡೆಯ ವಾಹನಗಳು ಸಾಗುವಾಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌  ಮತ್ತು ಅವರ ಪರಿವಾರ ರಸ್ತೆಯಲ್ಲಿ ಕಾಯಬೇಕಾದ ಸನ್ನಿವೇಶ ಸೋಮವಾರ ನ್ಯೂಯಾರ್ಕ್ ರಸ್ತೆಯಲ್ಲಿ  ನಡೆದಿದೆ. ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್  ಆಗಿದೆ. ಉನ್ನತ ಮಟ್ಟದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು ಪ್ಯಾಲೆಸ್ಟೈನ್ ಅನ್ನು ರಾಷ್ಟ್ರವಾಗಿ ಗುರುತಿಸುವುದಾಗಿ ಘೋಷಿಸಿದ ಬಳಿಕ ಈ ಘಟನೆ ನಡೆದಿದೆ.

   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಬೆಂಗಾವಲು ಪಡೆಯ ವಾಹನಗಳು ಸೋಮವಾರ ರಸ್ತೆಯಲ್ಲಿ ಸಾಗಬೇಕಾದಾಗ ಪೊಲೀಸರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪರಿವಾರವನ್ನು ತಡೆದರು. ವಿಪರ್ಯಾಸವೆಂದರೆ ಇದು 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮ್ಯಾಕ್ರನ್ ಭಾಷಣ ಮಾಡಿದ ಸ್ವಲ್ಪ ಸಮಯದ ಮ್ಯಾನ್‌ಹ್ಯಾಟನ್‌ನಲ್ಲಿ ಈ ಘಟನೆ ನಡೆದಿದೆ.

   ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತು ಮ್ಯಾಕ್ರನ್ ಮತ್ತು ಅವರ ತಂಡವು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಈ ವೇಳೆ ಪೊಲೀಸ್ ಅಧಿಕಾರಿ, ಫ್ರಾನ್ಸ್ ಅಧ್ಯಕ್ಷರಿಗೆ ಕ್ಷಮಿಸಿ, ಅಧ್ಯಕ್ಷರೇ, ನನಗೆ ತುಂಬಾ ವಿಷಾದವಿದೆ. ಇದೀಗ ಎಲ್ಲವೂ ಸ್ಥಗಿತಗೊಂಡಿದೆ. ಮೋಟಾರ್‌ಕೇಡ್ ಬರುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

   ಬಳಿಕ ಮ್ಯಾಕ್ರನ್ ಅವರು ಟ್ರಂಪ್ ಅವರಿಗೆ ಕರೆ ಮಾಡಿ, ನಾನು ರಸ್ತೆಯಲ್ಲಿ ಕಾಯುತ್ತಿದ್ದೇನೆ. ಯಾಕೆಂದರೆ ಎಲ್ಲವೂ ನಿಮಗಾಗಿ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮೋಟಾರ್‌ಕೇಡ್ ಹಾದುಹೋದ ಬಳಿಕ ಮತ್ತೆ ರಸ್ತೆಯನ್ನು ಪಾದಚಾರಿಗಳಿಗೆ ತೆರೆಯಲಾಗಿದೆ. ಮ್ಯಾಕ್ರನ್ ಅವರು ಫ್ರೆಂಚ್ ರಾಯಭಾರ ಕಚೇರಿಯಗೆ ಕಾಲ್ನಡಿಗೆಯಲ್ಲೇ ತೆರಳಿದರು. ಇದಕ್ಕಾಗಿ ಸುಮಾರು ಅರ್ಧ ಗಂಟೆ ನಡೆದ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅನೇಕ ಜನರು ಮುಂದಾಗಿದ್ದಾರೆ . 

   ಉನ್ನತ ಮಟ್ಟದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಮ್ಯಾಕ್ರನ್ ಅವರು ಪ್ಯಾಲೆಸ್ಟೈನ್ ಅನ್ನು ಫ್ರಾನ್ಸ್ ಗುರುತಿಸುವುದಾಗಿ ಹೇಳಿದರು. ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಜಂಟಿಯಾಗಿ ಆಯೋಜಿಸಿದ್ದ ಈ ಸಭೆಯಲ್ಲಿ ಪ್ಯಾಲೆಸ್ಟೈನ್ ರಾಜ್ಯತ್ವಕ್ಕೆ ಅಂತಾರಾಷ್ಟ್ರೀಯ ಬೆಂಬಲ ಮತ್ತು ಎರಡು ರಾಜ್ಯ ಪರಿಹಾರದ ಕುರಿತು ಚರ್ಚೆ ನಡೆಸಲಾಯಿತು. ಫ್ರಾನ್ಸ್ ನೊಂದಿಗೆ ಅಂಡೋರಾ, ಬೆಲ್ಜಿಯಂ, ಲಕ್ಸೆಂಬರ್ಗ್, ಮಾಲ್ಟಾ ಮತ್ತು ಮೊನಾಕೊದ ನಾಯಕರು ಕೂಡ ಪ್ಯಾಲೆಸ್ಟೈನ್ ಅನ್ನು ಗುರುತಿಸುವುದಾಗಿ ಘೋಷಿಸಿದರು. 

   ಈ ಶೃಂಗಸಭೆಯನ್ನು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಬಹಿಷ್ಕರಿಸಿದವು. ಇದು ಹಮಾಸ್‌ಗೆ ಉಡುಗೊರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮಾತನಾಡಿ, ಹಿಂಸಾಚಾರವನ್ನು ಕೊನೆಗೊಳಿಸಲು ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿ ವಿವಿಧ ಸುಧಾರಣೆಗಳನ್ನು ತರಬೇಕಿದೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link