ಸಾಂಸ್ಕೃತಿಕ ಅಭಿರುಚಿಯುಳ್ಳವರು ಸಂಸತ್ತನ್ನು ಪ್ರತಿನಿಧಿಸುವಂತಾಗಲಿ :ಡಾ.ದೊಡ್ಡರಂಗೇಗೌಡ

ತುಮಕೂರು

    ಸಾಂಸ್ಕೃತಿಕ ಸಾಹಿತ್ಯ ಅಭಿರುಚಿಯುಳ್ಳವರು ಸಂಸತ್ತಿಗೆ ಆಯ್ಕೆಯಾಗಬೇಕು. ಡಾ.ಸಿ.ಸೋಮಶೇಖರ್ ಅವರು ವಾಜಪೇಯಿ ಅವರಂತೆ ವಾಕ್ಪಟುತ್ವ, ಕವಿ ಮನಸ್ಸು, ಅಧಿಕಾರಿಯಾಗಿ ಜನರ ಸಂವೇದನೆಗೆ ಸ್ಪಂದಿಸಬಲ್ಲವರು. ಇಂತಹವರನ್ನು ಲೋಕಸಭೆಗೆ ಆಯ್ಕೆ ಮಾಡುವ ಕೆಲಸ ಆಗಬೇಕು ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಆಶಿಸಿದರು.

   ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ, ಡಾ.ಸಿ.ಸೋಮಶೇಖರ್ ಅಭಿಮಾನಿ ಬಳಗ ಹಾಗೂ ಸಪ್ನ ಬುಕ್ ಹೌಸ್‌ನವರು ಆಯೋಜಿಸಿದ್ದ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ನೀನೊಲಿದ ಬದುಕು ಅತ್ಮನಿವೇದÀನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವ್ಯಕ್ತಿಯ ಆತ್ಮಕಥನ ಎನ್ನುವುದು ಒಂದು ರೀತಿಯಲ್ಲಿ ತಪ್ಪೊಪ್ಪಿಗೆ ಕೃತಿ. ಆದರೆ ಕೆಲವರು ತಮ್ಮ ತಪ್ಪುಗಳನ್ನು ಮುಚ್ಚಿಡುವುದೇ ಹೆಚ್ಚು. ಡಾ.ಸಿ.ಸೋಮಶೇಖರ್ ತಮ್ಮ ಕೃತಿಯಲ್ಲಿ ತಾವು ಅನುಭವಿಸಿದ ನೋವು, ನಲಿವುಗಳನ್ನು ಸಮವಾಗಿ ಚಿತ್ರಿಸಿದ್ದಾರೆ.

    ಇನ್ನೂ ವ್ಯಕ್ತಿತ್ವ ಎಂಬುದು ಒಂದು ದಿನದಲ್ಲಿ ನಿರ್ಮಾಣವಾಗುವಂತಹದಲ್ಲ.ಸ್ಪಷ್ಟ ತಯಾರಿ,ಸಂಕಲ್ಪ, ಅದಕ್ಕೆ ಬೇಕಾದ ದಾರಿ ಎಲ್ಲವೂ ಅಗತ್ಯ. ಅನೇಕ ಜೀವಂತ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿ ಕೊಂಡು ಮಾನವೀಯತೆಯ ಸೇವೆಗೆ ನಿಂತವರು. ಇವರು ಪಾರ್ಲಿಮೆಂಟ್‌ಗೆ ಹೋದರೆ ಜನರ ಪರವಾಗಿ, ಅದರಲ್ಲಿಯೂ ಬಡ ಜನರ ಪರವಾಗಿ ಮಾತನಾಡುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ನುಡಿದರು.

   ಪ್ರೀತಿಯಿಂದ ತಿದ್ದುವ ಕೆಲಸ; ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಡಾ.ಸಿ.ಸೋಮಶೇಖರ್ ಡಿ.ಸಿ. ಇದ್ದಾಗ ನಾನು ಎ.ಸಿ.ಯಾಗಿ ಕೆಲಸ ಮಾಡಿದ್ದೇನೆ. ಅನೇಕ ವಿಷಯಗಳನ್ನು ಕಲಿತಿದ್ದೀನಿ. ನೀನೊಲಿದ ಬದುಕು ಒಂದು ಎಪಿಸೋಡ್‌ಗೆ ಮುಗಿಯುವಂತಹದ್ದಲ್ಲ. ಇಂತಹ ಹಲವು ಎಪಿಸೋಡ್ ಅಗತ್ಯವಿದೆ. ಆಡಳಿತದಲ್ಲಿ ಇತರೆ ಅಧಿಕಾರಿಗಳು ಹಾಗೂ ಜನಸಾಮಾನ್ಯರನ್ನು ಪ್ರೀತಿಯಿಂದಲೇ ತಿದ್ದುವ ಕೆಲಸ ಮಾಡಿದರು. ಅವರ ಬದುಕು ಮತ್ತಷ್ಟು ಹಸನಾಗಲಿ ಎಂದು ಶುಭ ಹಾರೈಸಿದರು.

   ಜಿಲ್ಲೆಯ ನಾಡಿಮಿಡಿತ ಬಲ್ಲವರು: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕಲೆ ಸಾಹಿತ್ಯ, ಸಂಗೀತ ತನ್ನದೆ ಇತಿಹಾಸ ಇರುವ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಹೆಮ್ಮೆಯ ವಿಚಾರ. ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಜಿಲ್ಲಾಧಿಕಾರಿಯಾಗಿ ಇಂಚಿAಚು ಬಲ್ಲವರು. ಸಾಂಸ್ಕೃತಿಕ ವಲಯದವನ್ನು ಹೆಚ್ಚು ಪ್ರೀತಿಸುತ್ತಿದ್ದರುಎಂದರು.

   ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಡಾ.ಸಿ.ಸೋಮಶೇಖರ್ ವೃತ್ತಿಯಿಂದ ನಿವೃತ್ತರಾದರೂ ಪ್ರೀತಿಯಲ್ಲಿ ಇಂದಿಗೂ ಜಿಲ್ಲೆಯ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ನನಗೂ ಅವರಿಗೆ ಸುಮಾರು 45 ವರ್ಷಗಳ ಸ್ನೇಹ. ಸಾಹಿತಿಯಾಗಿ, ಚರ್ಚಾ ಪಟುವಾಗಿ ನನಗೆ ಪ್ರತಿಸ್ಪರ್ಧಿಗಳು, ಅವರ ಬದುಕು ವಾಸ್ತವ ನೆಲಗಟ್ಟಿನಲ್ಲಿ ಇರುವಂತದ್ದು, ಕೃತಕತೆ ಇಲ್ಲ. ಅವರ ತಾಯಿಯ ತ್ಯಾಗ ಇಂದು ಡಾ.ಸೋಮಶೇಖರ್ ಅಂತಹ ಸಜ್ಜನ ವ್ಯಕ್ತಿಯನ್ನು ಕರ್ನಾಟಕಕ್ಕೆ ನೀಡಿದೆ.. ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

    ಕೃತಿ ಕುರಿತು ಮಾತನಾಡಿದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ನೀನೊಲಿದ ಬದುಕು ಕೃತಿ ಡಾ.ಸಿ.ಸೋಮಶೇಖರ್ ಅವರ ಜೀವನ-ಸಾಧನ ಪಥದ ಅವಲೋಕನವಾಗಿದ್ದು, ಅಂತರAಗದ ಭಾವನೆಗಳನ್ನು ಮೇಳೈಸಿ ಇತರರಿಗೆ ಸ್ಫೂರ್ತಿಕೊಡುವ ಕೃತಿ ಎನಿಸಿದೆ ಎಂದರು. ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸರ್ವಮಂಗಳ ಸೋಮಶೇಖರ್, ಟೂಡಾ ಅಧ್ಯಕ್ಷ ಚಂದ್ರಶೇಖರ್, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಪಾಟೀಲ್, ಸ್ಫೂರ್ತಿಚಿದಾನಂದ್ ಹೇಮಾಪಂಚಾಕ್ಷರಿ, ಕಸಾಪ ಪದಾಧಿಕಾರಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ, ಕೆ.ಎಸ್. ಉಮಾಮಹೇಶ್, ಎಂ.ಎಚ್.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಅಪರಿಮಿತ

     ಕೃತಿಕಾರ ಗಡಿಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ತುಮಕೂರು ನನ್ನ ಕರ್ಮಭೂಮಿ. ಕ್ರೀಡಾ ಅಧಿಕಾರಿಯಾಗಿ 3 ವರ್ಷ, ಜಿಲ್ಲಾಧಿಕಾರಿಯಾಗಿ 3 ವರ್ಷ ಕೆಲಸ ಮಾಡಿದ ತುಮಕೂರು ನನಗೆ ಎರಡನೇ ತವರು ಮನೆಯಿದ್ದಂತೆ. ಇಲ್ಲಿನ ಜನ ನನಗೆ ನೀಡಿದ ಪ್ರೀತಿ, ಆಶೀರ್ವಾದ, ಸಲಹೆ ನಾನು ಮರೆಯಲು ಸಾಧ್ಯವೇ ಇಲ್ಲ.

    ಈಗಾಗಲೇ ಕೃತಿ ಎರಡು ಕಡೆಗಳಲ್ಲಿ ಬಿಡುಗಡೆಯಾಗಿದೆ. ಅನೇಕ ಗೆಳೆಯರು, ಹಿತೈಷಿಗಳು ಇರುವ ತುಮಕೂರು ಜಿಲ್ಲೆಯಲ್ಲಿ ಕಸಾಪ ಬಿಡುಗಡೆ ಮಾಡಿಸಿದ್ದು ನನಗೆ ಹೆಚ್ಚು ಖುಷಿ ತಂದಿದೆ. ನನ್ನ ಇಡೀ ಬದುಕನ್ನು ನಡೆಸಿಕೊಂಡು ಬಂದಿದ್ದು ವಚನ ಸಾಹಿತ್ಯ. ದೈವಕೃಪೆ, ಗುರು ಕಾರುಣ್ಯ, ತಾಯಿ ಆಶೀರ್ವಾದ ಎಂದು ಹೇಳಿ ಮಾಜಿ ಸಿಎಂ ಬಿಎಸ್‌ವೈ, ಬೊಮ್ಮಾಯಿ ಅವರ ಸಹಕಾರವನ್ನು ಸ್ಮರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap