ಎಸ್.ಆರ್.ಶ್ರೀನಿವಾಸ ಹೆಗಲಿಗೆ ಸಾರಿಗೆ ನಿಗಮದ ಹೊಣೆ….!

ಬೆಂಗಳೂರು: 

     ರಾಜ್ಯ ಸರ್ಕಾರ ಅಳೆದು ತೂಗಿ ಕೊನೆಗೂ ನಿಗಮ ಮಂಡಳಿ ನೇಮಕಾತಿಯ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, 32 ಶಾಸಕರನ್ನು ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

     ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಿ. ಪುಟ್ಟರಂಗಶೆಟ್ಟಿ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ, ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ನಿಗಮ ಮಂಡಳಿ ನೇಮಕ ಪಟ್ಟಿ

ಸಿ.ಪುಟ್ಟರಂಗಶೆಟ್ಟಿ: ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್,ಬಿ.ಜಿ.ಗೋವಿಂದಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ,ಹಂಪನಗೌಡ ಬಾದರ್ಲಿ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ,ಅಪ್ಪಾಜಿ ಸಿ.ಎಸ್.ನಾಡಗೌಡ: ಕೆಎಸ್​ಡಿಎಲ್, ರಾಜು ಕಾಗೆ: ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ), ಹೆಚ್.ವೈ.ಮೇಟಿ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ,ಎಸ್.ಆರ್.ಶ್ರೀನಿವಾಸ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,ಬಸವರಾಜ ನೀಲಪ್ಪ ಶಿವಣ್ಣನವರ್: ಅರಣ್ಯ ಅಭಿವೃದ್ಧಿ ನಿಗಮ,ಎಚ್.ಸಿ.ಬಾಲಕೃಷ್ಣ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ,ಜಿ.ಎಸ್.ಪಾಟೀಲ್: ಖನಿಜ ಅಭಿವೃದ್ಧಿ ನಿಗಮ ನಿಯಮಿತ , ಎನ್.ಎ.ಹ್ಯಾರಿಸ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ,ಕೌಜಲಗಿ ಮಹಾಂತೇಶ್ ಶಿವಾನಂದ: ಹಣಕಾಸು ಸಂಸ್ಥೆ,ಬೀಳಗಿ ಶಾಸಕ ಜೆ.ಟಿ.ಪಾಟೀಲ್: ಹಟ್ಟಿ ಚಿನ್ನದ ಗಣಿ,ರಾಜಾ ವೆಂಕಟಪ್ಪ ನಾಯಕ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ,ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ: ಲ್ಯಾಂಡ್ ಆರ್ಮಿ,ಕೆ.ಎಂ.ಶಿವಲಿಂಗೇಗೌಡ: ಕರ್ನಾಟಕ ಗೃಹ ಮಂಡಳಿ,ಅಬ್ಬಯ್ಯ ಪ್ರಸಾದ್: ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ,ಬೇಳೂರು ಗೋಪಾಲಕೃಷ್ಣ: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ,ಎಸ್.ಎನ್.ನಾರಾಯಣಸ್ವಾಮಿ: ಕೆಯುಡಿಐಸಿ ಮತ್ತು ಎಫ್​ಸಿ, ಪಿ.ಎಂ.ನರೇಂದ್ರಸ್ವಾಮಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,ಟಿ.ರಘುಮೂರ್ತಿ: ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ,ರಮೇಶ್ ಬಾಬು ಬಂಡಿಸಿದ್ದೇಗೌಡ: ಚೆಸ್ಕಾಂ,ಬಿ.ಶಿವಣ್ಣ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ,ಎಸ್.ಎನ್.ಸುಬ್ಬಾರೆಡ್ಡಿ: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ,ವಿನಯ ಕುಲಕರ್ಣಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು: ಜಂಗಲ್ ಲಾಡ್ಜಸ್,ಬಸನಗೌಡ ದದ್ದಲ್: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ,ಖನೀಜ್ ಫಾತಿಮಾ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ,ವಿಜಯಾನಂದ ಕಾಶಪ್ಪನರ್: ಕರ್ನಾಟಕ ಕ್ರೀಡಾ ಪ್ರಾಧಿಕಾರ,ಶ್ರೀನಿವಾಸ ಮಾನೆ: ಡಿಸಿಎಂ ರಾಜಕೀಯ ಸಲಹೆಗಾರ,ಟಿ.ಡಿ.ರಾಜೇಗೌಡ: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ,ಎಂ.ರೂಪಕಲಾ: ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap