ಅಮೇರಿಕ ಚುನಾವಣೆ : ಪ್ರಚಾರ ಆರಂಭಿಸಿದ ನಿಕ್ಕಿ ಹ್ಯಾಲೆ

ನಾನು ಭಾರತೀಯ ವಲಸಿಗರ ಹೆಮ್ಮೆಯ ಪುತ್ರಿ : ನಿಕ್ಕಿ ಹ್ಯಾಲೆ

ನವದೆಹಲಿ: 

    ಅಮೇರಿಕದಲ್ಲಿ ಗರಿಗೆದರಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಕಣದಲ್ಲಿದ್ದು ಅವರಲ್ಲಿ ಒಬ್ಬರಾದ ನಿಕ್ಕಿ ಹ್ಯಾಲೆ ಅವರು ಪ್ರಚಾರ ಆರಂಭಿಸಿದ್ದು ನಾನು ಭಾರತೀಯ ವಲಸಿಗರ ಹೆಮ್ಮೆಯ ಪುತ್ರಿ ಎಂದು ಹೇಳುವ ಮೂಲಕ ವಲಸಿಗರ ಮತ ಸೆಳೆಯಲು ಪ್ರಯತ್ನಿಸಿದ್ದಾರೆ ಮತ್ತು ಈ ಮೂಲಕ ಪ್ರಚಾರ ಆರಂಭಿಸಿದ್ದಾರೆ.

     ವಿಶ್ವಸಂಸ್ಥೆಯಲ್ಲಿ ಅಮೇರಿಕದ ಮಾಜಿ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ  ಉಮೇದುವಾರಿಕೆಯನ್ನು ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ‘ನಾನು ಭಾರತೀಯ ವಲಸಿಗರ ಹೆಮ್ಮೆಯ ಮಗಳು. ನನ್ನ ಪೋಷಕರು ಉತ್ತಮ ಜೀವನವನ್ನು ಹುಡುಕುತ್ತಾ ಭಾರತವನ್ನು ತೊರೆದರು, ಅವರು ದಕ್ಷಿಣ ಕೆರೊಲಿನಾದಲ್ಲಿ ವಾಸಿಸುತ್ತಿದ್ದರು. ನಮ್ಮ ಊರು ನಮ್ಮನ್ನು ಪ್ರೀತಿಸಲು ಬಂದಿತು, ಆದರೆ ಅದು ಯಾವಾಗಲೂ ಸುಲಭವಾಗಿರಲಿಲ್ಲ, ನಮ್ಮದು ಏಕೈಕ ಭಾರತೀಯ ಕುಟುಂಬ ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap