ನಿಕ್ರಾ ಯೋಜನೆ : ರೈತರ ಸುಧಾರಣಾ ಸಂಕೇತ

ಕೊರಟಗೆರೆ:


ತಾಲ್ಲೂಕಿನ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಕೇಂದ್ರ ಕೃಷಿವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಯನ್ನು ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿಗಳು ಮತ್ತು ನಮ್ಮ ರೈತರು ಶ್ರಮ ವಹಿಸಿ ಯಶಸ್ವಿಗೊಳಿಸಿರುವುದು ಒಣ ಬೇಸಾಯ ಪದ್ದತಿಯಲ್ಲಿ ರೈತರ ಜೀವನಮಟ್ಟ ಸುಧಾರಣೆಯ ಸಂಕೇತ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದ ಉತ್ತಮ್ ಪಂಚಾಯತ್ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಡಿ.ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಯೋಜನೆಯ ಸಮಗ್ರ ಅಭಿವೃದ್ದಿಯನ್ನು ಪರಿಶೀಲಿಸಿ ಮಾತನಾಡಿದರು.

2010 ರಲ್ಲಿ ಪ್ರಾರಂಭವಾದ ಈ ಯೋಜನೆಯು ಇಲ್ಲಿಯವರೆಗು ಬಹಳ ವ್ಯವಸ್ಥಿತವಾಗಿ ನಡೆದಿದೆ. ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಈ ಯೋಜನೆಯನ್ನು ಉತ್ತಮವಾಗಿ ಸಾಕಾರ ಮಾಡಿದ್ದಾರೆ. ನಮ್ಮ ರೈತರು ಇದನ್ನು ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಯೋಜನೆಯು ಮಳೆಯಾಧಾರಿತ ಖುಷ್ಕಿ ಬೇಸಾಯದ ರೈತರಿಗೆ ಉಪಯುಕ್ತವಾಗಿದೆ.

ಒಣ ಪ್ರದೇಶದಲ್ಲಿ ಲಾಭದಾಯಕ ಗೋಡಂಬಿ, ನೆÀಲ್ಲಿ, ಹುಣಸೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳನ್ನು ಸಹ ಇಳಿಜಾರಿನ ಮಳೆ ನೀರನ್ನು ಉಪಯೋಗಿಸಿಕೊಂಡು ಬೆಳೆದಿರುವುದರಿಂದ ರೈತನ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದರು.

ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆದು, ನಿಲ್ಲಿಸಿ ಉಪಯೋಗ ಮಾಡಿಕೊಳ್ಳಲಾಗಿದೆ. ಕಡಿಮೆ ಮಳೆಯಲ್ಲಿಯೂ ಸಹ ನೀರನ್ನು ಸಂರಕ್ಷಣೆ ಮಾಡಿ ಬೇಸಾಯ ಮಾಡಿದ್ದು ಸುಮಾರು 85 ಕೃಷಿ ಹೊಂಡಗಳು, ಹಲವು ಚೆಕ್‍ಡ್ಯಾಂಗಳು, ನಾಲಾ ಬದು, ಹೂಳೆತ್ತುವಿಕೆ,

ಕೊಳವೆಬಾವಿಗಳ ಅಭಿವೃದ್ಧಿ ಇವೆಲ್ಲಾ ಕೆಲಸಗಳು ಅಕಾಲಿಕ ಅತಿವೃಷ್ಟಿ ಮಳೆಯನ್ನು ಮತ್ತು ಕಡಿಮೆ ನೀರಿನ ಅನಾವೃಷ್ಟಿ ಪ್ರಮಾಣವನ್ನು ತಡೆದುಕೊಳ್ಳುವ ಕೃಷಿ ಪದ್ದತಿಯಾಗಿದೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಯಲು ಸೀಮೆಯ ಮಳೆಯಾಧಾರಿತ ಪ್ರದೇಶಗಳ ಒಣ ಬೇಸಾಯಕ್ಕೆ ಈ ಯೋಜನೆಯನ್ನು ವಿಸ್ತರಿಸಬೇಕಿದೆ. ರಾಜ್ಯ ಸರ್ಕಾರವೂ ಕೂಡ ಇದಕ್ಕೆ ಕೈ ಜೋಡಿಸಬೇಕಾಗಿದೆ.

ಯೋಜನೆ ಯಶಸ್ಸಿಗೆ ಕೃಷಿ ವಿಜ್ಞಾನಿಗಳು, ರೈತರು ಮತ್ತು ಗ್ರಾಮ ಪಂಚಾಯತಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದÀರ್ಭದಲ್ಲಿ ಡಿ.ನಾಗೇನಹಳ್ಳಿಯ ರೈತರ ಗ್ರಾಮ ವಿಕಾಸ ಚೇತನ ಸಂಸ್ಥೆಗೆ ಅರ್ಧ ಎಕರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಎಕರೆ ಹಾಗೂ ಸ್ತ್ರೀ ಶಕ್ತಿ ಕೇಂದ್ರಕ್ಕೆ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿ ಹಾಗೂ ಆಡಳಿತಾಧಿಕಾರಿ ಲೋಗಾನಂದನ್ ಮಾತನಾಡಿ, ಈ ಯೋಜನೆಯಲ್ಲಿ ಜಲಾನಯನ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದು, 2010ರಲ್ಲಿ ನಮ್ಮ ಇಲಾಖೆಯ ಡಿ.ಜಿರವರು ಉದ್ಘಾಟನೆ ಮಾಡಿದ್ದು, ಇದರ ಯಶಸ್ಸಿಗೆ ಎಲ್ಲರೂ ಕಾರಣರಾಗಿದ್ದಾರೆ.

ಈ ಯೋಜನೆಯಲ್ಲಿ 2.00 ಲಕ್ಷ ಕ್ಯೂಬಿಕ್ ಲೀಟರ್ ನೀರನ್ನು ಸಂರಕ್ಷಿಸಲಾಗಿದೆ. ಯೋಜನೆಯಲ್ಲಿ ಕಡಿಮೆ ನೀರಿನ ವಾಣಿಜ್ಯ ಬೆಳೆಗಳ ಕೃಷಿಯೊಂದಿಗೆ ನೂತನ ಸಂಶೋಧನೆಯ ಭತ್ತ, ತೊಗರಿ, ರಾಗಿ ಬೆಳೆಗಳನ್ನು ಬೆಳೆಯಲಾಗಿದೆ. ಕಷ್ಟಕರ ವಾತವರಣದಲ್ಲಿಯು ಸಹ ಕೃಷಿ ಮಾಡುವ ಸಂಶೋಧನೆಯ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆ.ವಿ.ಕೆಯ ಮಣ್ಣು ತಜ್ಞ ವಿಜ್ಞಾನಿ ರಮೇಶ್, ತೋಟಗಾರಿಕಾ ವಿಜ್ಞಾನಿ ಪ್ರಶಾಂತ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ದೊಡ್ಡಸಿದ್ದಯ್ಯ, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಅರಣ್ಯಾಧಿಕಾರಿಗಳಾದ ಸುರೆಶ್, ನವನೀತ್, ತೋಟಗಾರಿಕೆ ಇಲಾಖೆಯ ಪುಷ್ಪಲತಾ, ವೈದ್ಯಾಧಿಕಾರಿ ಕೋಕಿಲ,

ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಬಿ.ಎಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ ಅಧ್ಯಕ್ಷೆ ಗಂಗಾದೇವಿ, ಉಪಾಧ್ಯಕ್ಷ ಉಮೇಶ್‍ಚಂದ್ರ,

ಸದಸ್ಯರುಗಳಾದ ಸರ್ವೇಶ್, ಚಂದ್ರಯ್ಯ, ರಂಗಶಾಮಯ್ಯ, ಕೆ.ಎಲ್ ಮಂಜುನಾಥ್, ರೈತ ಮುಖಂಡರುಗಳಾದ ಮಹೇಶ್, ಯೋಗೇಶ್, ಲೋಕೇಶ್, ರಾಕೇಶ್, ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು.

ಶಾಸಕ ಡಾ. ಜಿ. ಪರಮೇಶ್ವರ್ ಡಿ. ನಾಗೇನಹಳ್ಳಿಯಲ್ಲಿ ನಿಕ್ರಾ ಯೋಜನೆಯ ಅನುಷ್ಠಾನಗೊಂಡಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap