ಹೇಮೆ ನೀರಿಗಾಗಿ ನಮ್ಮಲೇ ಕಚ್ಚಾಡುವುದು ಬೇಡ : ಶಾಸಕರ ಬೇಸರ 

ಕುಣಿಗಲ್ :

     ತುಮಕೂರು ಜಿಲ್ಲೆಗೆ ನ್ಯಾಯುತವಾಗಿ ಹರಿಯಬೇಕಾಗಿರುವ ಹೇಮಾವತಿ ನೀರಿನ ಬಗ್ಗೆ ಹೋರಾಟ ಮಾಡಬೇಕಾಗಿರುವ ಜಿಲ್ಲೆಯ ರಾಜಕೀಯ ಮುಖಂಡರು ಕುಣಿಗಲ್ ತಾಲೂಕಿನ ಲಿಂಕ್ ಕೆನಾಲ್ ವಿರೋಧಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಭಾನುವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ನಮ್ಮ ನೆರೆಯ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು, ನಾಲೆಯನ್ನು ಹೊಡೆದು ಹಾಕಿ, ನೀರು ಹರಿಯದಂತೆ ತಡೆವೋಡ್ಡಿದರು, ಈ ರಾಜಕಾರಣಿಗಳ ವಿರುದ್ದ ಬೀದಿಗಿಳಿದ 

    ಮಾಜಿ ಸಚಿವ ವೈ.ಕೆ.ರಾಮಯ್ಯ ಅವರು ತಮ್ಮ ನೂರಾರು ಬೆಂಬಲಿಗರೊAದಿಗೆ ಕುಣಿಗಲ್ ಪಟ್ಟಣದ ಅಂಧಿನ ರಾಷ್ಟಿçÃಯ ಹೆದ್ದಾರಿ ೪೮ ರ ಬಿ.ಎಂ ರಸ್ತೆಗೆ ಸೇತುವೆ ನಿರ್ಮಾಣ ಮಾಡಿ ನಮ್ಮ ಜಿಲ್ಲೆಗೆ ಹೇಮಾವತಿ ನೀರು ಹರಿಸಿ ಇಲ್ಲವಾದಲ್ಲಿ ನಿಮ್ಮ ಭಾಗಕ್ಕೆ ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ನಡೆಸಿದರು, ಬಳಿಕ ನಾಲಾ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ತುಮಕೂರು ಹೇಮಾವತಿ ಕಚೇರಿ ಬಳಿ ಹೋರಾಟ ನೆಡೆಸಿ ಹಲವು ದಿನ ಜೈಲು ಶಿಕ್ಷೆ ಅನುಭವಿಸಿದರು, ವೈ.ಕೆ.ರಾಮಯ್ಯ ಅವರ ಹೋರಾಟಕ್ಕೆ ಬೆಚ್ಚಿಬಿದ್ದ ಅಂಧಿನ ಸರ್ಕಾರ ನಾಲೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿತ್ತು, ಬಳಿಕ ಜಿಲ್ಲೆಗೆ ಹೇಮಾವತಿ ನೀರು ಹರಿಯಿತ್ತು, ರಾಜಕೀಯ ಲಾಭಕ್ಕಾಗಿ ವೈ.ಕೆ.ಆರ್ ಹೋರಾಟ ನಡೆಸಲಿಲ್ಲ, ಇದನ್ನು ಜಿಲ್ಲೆಯ ರಾಜಕಾರಣಿಗಳು ಮನಗೊಳ್ಳಬೇಕಾಗಿದೆ, ತಮ್ಮ ಸ್ವಾರ್ಥಕ್ಕಾಗಿ ನೀರಾವರಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು,  

    ಜಿಲ್ಲೆಗೆ ೨೪ ಟಿ.ಎಂ.ಸಿ ನೀರು ಪ್ರತಿ ವರ್ಷ ಹರಿಸಬೇಕಾಗಿದೆ, ಆದರೆ ಈವರೆಗೂ ಪರಿಪೂರ್ಣವಾಗಿ ೨೪ ಟಿಎಂಸಿ ನೀರು ಹರಿದಿಲ್ಲ ಇದರ ಬಗ್ಗೆ ಹೋರಾಟ ನಡೆಸಬೇಕಾಗಿರುವ ಜಿಲ್ಲೆಯ ಮುಖಂಡರು ಕುಣಿಗಲ್ ತಾಲೂಕಿಗೆ ಮಂಜೂರಾಗಿರುವ ಲಿಂಕ್

    ಕೆನಾಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟ ಮಟ್ಟಿಗೆ ಸರಿ ಎಂದರು, ನಮ್ಮ ತಾಲೂಕು ಏನಾದರೂ ಬೇರೆ ಜಿಲ್ಲೆಗೆ ಸೇರಿದಿಯೇ, ತುಮಕೂರು ಜಿಲ್ಲೆಗೆ ಸೇರಿಲ್ಲವೇ ನಮ್ಮ ತಾಲೂಕಿನಿಂದ ಜಿಲ್ಲೆಗೆ ಏನು ಅನ್ಯಾಯವಾಗಿದೆಯೇ, ಸುಮ್ಮನೆ ಏಕೆ ಕಾಮಗಾರಿಗೆ ತೊಂದರೆ ನೀಡುತ್ತಿದ್ದೀರ, ನಮ್ಮಗಳ ಹೋರಾಟ ಏನಿದ್ದರು ೨೪ ಟಿಎಂಸಿ ಜಿಲ್ಲೆಗೆ ನೀರು ಹರಿಸುವುದರ ಬಗ್ಗೆ ಇರಬೇಕು ವಿನಃ ನಮ್ಮ ನಮ್ಮಲ್ಲೇ ನೀರಿಗಾಗಿ ಕಚ್ಚಾಡುವುದು ಸರಿಯಲ್ಲ ನಮ್ಮ ಜಿಲ್ಲೆಗೆ ನ್ಯಾಯಯುತವಾಗಿ ಹರಿಬೇಕಾಗಿರುವ ೨೪ ಟಿ.ಎಂ.ಸಿ ನೀರಿನ ಹೋರಾಟ ನೆಡೆಸಿದರೇ ಆ ಹೋರಾಟದಲ್ಲಿ ನಾನು ಸೇರಿ ನಮ್ಮ ತಾಲೂಕಿನ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು. 

 ತಾಲೂಕಿನ ರೈತರ ಹಿತ ಮುಖ್ಯ :

     ಕಳೆದ ೨೫ ವರ್ಷಗಳಿಂದ ತಾಲೂಕಿಗೆ ನಿಗಧಿ ಪಡಿಸಿರುವ ಮೂರು ಟಿಎಂಸಿ ನೀರು ಈವರೆಗೂ ಹರಿಸಿರುವುದಿಲ್ಲ, ನೀರು ಮತ್ತು ಕೃಷಿಯನ್ನು ನಂಬಿರುವ ತಾಲೂಕಿನ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ ಹಾಗೂ ನಾಗರೀಕರ ಕುಡಿಯುವ ನೀರಿಗೆ ಅಹಾಕಾರ ಪಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಹೀಗಾಗಿ ರೈತರ ಹಿತ ಕಾಪಾಡುವುದು ನನ್ನ ಅಧ್ಯ ಕರ್ತವ್ಯವಾಗಿದೆ ಸರ್ಕಾರದಿಂದ ಲಿಂಕ್ ಕೆನಾಲ್ ಯೋಜನೆ ಜಾರಿ ಮಾಡಲಾಗಿದೆ ಇದರ ಕಾಮಗಾರಿಗೆ ತೊಂದರೆ ನೀಡಬಾರದೆಂದು ಜಿಲ್ಲೆಯ ಎಲ್ಲಾ ರಾಜಕೀಯ ಮುಖಂಡರಿಗೆ ರಂಗನಾಥ್ ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link