ಹಣಕಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡ ನಿರ್ಮಲಾ ಸೀತಾರಾಮನ್…..!

ನವದೆಹಲಿ:

    ಕರ್ನಾಟಕದಿಂದ ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸತತ ಎರಡನೇ ಅವಧಿಗೆ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ಆರ್ಥಿಕ ವರ್ಷ 2024-25ನೇ ಹೊಸ ಸರ್ಕಾರದ ಬಜೆಟ್ ನ್ನು ಮಂಡಿಸಲಿದ್ದಾರೆ.

    ಹಣಕಾಸು ಸಚಿವೆ ಮಂಡಿಸಲಿರುವ ಬಜೆಟ್ ಮೋದಿ 3.0 ಸರ್ಕಾರದ ಆದ್ಯತೆಗಳು ಮತ್ತು ವಿಕಸಿತ ಭಾರತದ ಪರಿಕಲ್ಪನೆಗೆ ನಿರ್ದೇಶನವಾಗಲಿದೆ. ದೆಹಲಿಯ ಸಂಸತ್ ಭವನದ ಉತ್ತರ ಬ್ಲಾಕ್ ಕಚೇರಿಯನ್ನು ತಲುಪಿದ ನಂತರ, ನಿರ್ಮಲಾ ಸೀತಾರಾಮನ್ ಅವರನ್ನು ಹಣಕಾಸು ಕಾರ್ಯದರ್ಶಿ ಟಿ ವಿ ಸೊಮನಾಥನ್ ಮತ್ತು ಇತರ ಉನ್ನತ ಅಧಿಕಾರಿಗಳು ಸ್ವಾಗತಿಸಿದರು. ಹಣಕಾಸು ಸಚಿವ ಪಂಕಜ್ ಚೌಧರಿ ಉಪಸ್ಥಿತರಿದ್ದರು. 

    ಕಳೆದ ಫೆಬ್ರವರಿ ಸಾರ್ವತ್ರಿಕ ಚುನಾವಣೆ ಇದ್ದುದರಿಂದ ಎರಡು ತಿಂಗಳ ಅವಧಿಗೆ ಮಾತ್ರ ಬಜೆಟ್ ಮಂಡಿಸಿದ್ದರು. ಇದೀಗ ಚುನಾವಣೆ ಮುಗಿದು ಮತ್ತೆ ಎನ್ ಡಿಎ ಅಧಿಕಾರಕ್ಕೆ ಬಂದಿದ್ದು, ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಾರಿಗೆ ಮುಂದಿನ ತಿಂಗಳು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

   ನಿರ್ಮಲಾ ಸೀತಾರಾಮನ್ ಅವರು 2017 ರಲ್ಲಿ ಮೊದಲ ಮಹಿಳಾ ರಕ್ಷಣಾ ಮಂತ್ರಿಯಾಗಿ ನೇಮಕಗೊಂಡು ದಾಖಲೆ ಬರೆದಿದ್ದರು. ಅದಕ್ಕೂ ಮೊದಲು ಅವರು ಉದ್ಯಮ ಮತ್ತು ವಾಣಿಜ್ಯ ಇಲಾಖೆ ಮಂತ್ರಿಯಾಗಿದ್ದರು. 2014ರಿಂದ 2019ರವರೆಗೆ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯವರು ಅನಾರೋಗ್ಯಕ್ಕೆ ಒಳಗಾದಾಗ, 2019 ರ ಸಾರ್ವತ್ರಿಕ ಚುನಾವಣೆಯ ನಂತರ ಹೊಸದಾಗಿ ಮರು-ಚುನಾಯಿತ ಮೋದಿ ಸರ್ಕಾರದಲ್ಲಿ ಸೀತಾರಾಮನ್‌ಗೆ ಹಣಕಾಸು ಇಲಾಖೆ ನೀಡಲಾಯಿತು.

   ನಿರ್ಮಲಾ ಸೀತಾರಾಮನ್ ಅವರು ಸ್ವತಂತ್ರ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಇಂದಿರಾ ಗಾಂಧಿ ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದಾಗ ಅಲ್ಪಾವಧಿಗೆ ಹೆಚ್ಚುವರಿವಾಗಿ ಹಣಕಾಸು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು. 

    ಆಗಸ್ಟ್ 18, 1959ರಲ್ಲಿ ತಮಿಳುನಾಡಿನ ಮಧುರೈನಲ್ಲಿ ನಾರಾಯಣ್ ಸೀತಾರಾಮನ್ ಮತ್ತು ಸಾವಿತ್ರಿ ದಂಪತಿಯ ಮಗಳಾಗಿ ಜನಿಸಿದ ನಿರ್ಮಲಾ ಸೀತಾರಾಮನ್ ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ  ಈ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಎಂ.ಫಿಲ್ ನ್ನು ಮುಂದುವರಿಸಿದರು.

    ನಿರ್ಮಲಾ ಸೀತಾರಾಮನ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಇಂಗ್ಲೆಂಡ್ ನಲ್ಲಿ ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಜೆಎನ್‌ಯುನಲ್ಲಿ ಅಧ್ಯಯನ ಮಾಡುವಾಗ ತಮ್ಮ ಭಾವಿ ಪತಿ ಪರಕಾಲ ಪ್ರಭಾಕರ್ ಅವರನ್ನು ಭೇಟಿ ಮಾಡಿ ಪರಿಚಿತರಾಗಿ ಪರಿಚಯ ಸ್ನೇಹಕ್ಕೆ ತಿರುಗಿ 1986 ರಲ್ಲಿ ವಿವಾಹವಾದರು. ಅವರಿಗೆ ಪರಕಲಾ ವಾಂಗ್‌ಮೇಯಿ ಎಂಬ ಮಗಳಿದ್ದಾರೆ.

    ಸೀತಾರಾಮನ್ ಅವರ ರಾಜಕೀಯ ಜೀವನವು 2008 ರಲ್ಲಿ ಬಿಜೆಪಿಗೆ ಸೇರಿದಾಗ ಪ್ರಾರಂಭವಾಯಿತು , ಮತ್ತು ಎರಡು ವರ್ಷಗಳಲ್ಲಿ ಸುಷ್ಮಾ ಸ್ವರಾಜ್ ನಂತರ ಪಕ್ಷದ ಎರಡನೇ ಮಹಿಳಾ ವಕ್ತಾರರಾದರು, ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ದೂರದರ್ಶನದ ಚರ್ಚೆಗಳಲ್ಲಿ ಭಾಗವಹಿಸುತ್ತಾ ಜನಕ್ಕೆ ಪರಿಚಿತವಾದರು.

   ರಾಜಕೀಯಕ್ಕೆ ಧುಮುಕುವುದಕ್ಕೆ ಮೊದಲು ಹೈದರಾಬಾದ್‌ನ ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಮತ್ತು ನಗರದಲ್ಲಿ ಶಾಲೆಯನ್ನು ಪ್ರಾರಂಭಿಸಿದರು. 2003 ರಿಂದ 2005 ರವರೆಗೆ, ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap