ಡಿಸಿಎಂ ಭೇಟಿ ಮಾಡಿದ ನಿಶಾ ಯೋಗೀಶ್ವರ್‌….!

ಬೆಂಗಳೂರು: 

      ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌  ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಬೆಂಗಳೂರಿನ ಕೆ.ಕೆ ಗೆಸ್ಟ್‌ ಹೌಸ್‌ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿರುವುದು ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಇದು ಖಾಸಗಿ ಭೇಟಿನಾ?‌ ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ ಭೇಟಿಯಾ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ. ಡಿ.ಕೆ. ಶಿವಕುಮಾರ್‌ ಅವರ ಮೂಲಗಳ ಪ್ರಕಾರ, ಇದೊಂದು ರಾಜಕೀಯ ಮಾತುಕತೆಗಾಗಿ ನಡೆದ ಭೇಟಿ. ಹಾಗಿದ್ದರೆ ಏನು ರಾಜಕೀಯ ಎನ್ನುವುದು ಸ್ಪಷ್ಟವಾಗಿಲ್ಲ.‌

 

    ಇದೀಗ ಅದೇ ಸಿ.ಪಿ. ಯೋಗೇಶ್ವರ್‌ ಅವರು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆಗೆ ರಾಜಕೀಯ ಮೈತ್ರಿಯ ಮಾತುಕತೆ ಶುರು ಮಾಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನ ಮಾತುಕತೆಗೆ ಚಾಲನೆ ನೀಡಿದ್ದು ಯೋಗೇಶ್ವರ್‌ ಎನ್ನಲಾಗುತ್ತಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಾರೆ.

    ಇದರ ನಡುವೆಯೇ ಇದೀಗ ನಿಶಾ ಯೋಗೇಶ್ವರ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. 33 ವರ್ಷದ ನಿಶಾ ಯೋಗೇಶ್ವರ್‌ ಅವರು ಚಿತ್ರನಟಿ ಮತ್ತು ರೂಪದರ್ಶಿಯಾಗಿದ್ದಾರೆ. ಇದರ ಜತೆಗೆ ಕೆಲವು ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಮದ್ದೂರಿನಲ್ಲಿ ಅವರಿಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಇದೆ.

     ಈ ಹಿಂದೆ ನಿಶಾ ಯೋಗೀಶ್ವರ್‌ ಅವರು ರಾಜಕೀಯಕ್ಕೆ ಬರುತ್ತಾರೆ, ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಡಿತ್ತು. ನಿಶಾ ಅವರಿಗೆ ರಾಜಕೀಯದಲ್ಲಿ ಆಸಕ್ತಿಯೂ ಇದೆ ಎನ್ನಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಮತ್ತು ಡಿ.ಕೆ.ಶಿ ಅವರ ಆಪ್ತರು ಇದೊಂದು ರಾಜಕೀಯ ಭೇಟಿ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ.

 

Recent Articles

spot_img

Related Stories

Share via
Copy link
Powered by Social Snap