ಮುಂಬೈ :
ನಿಸ್ಸಾನ್ ಕಂಪನಿ ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಫೇಸ್ಲಿಫ್ಟ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.99 ಲಕ್ಷದಿಂದ ರೂ. 11.50 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಿದೆ. ಹೊಸ ಕಾರು ಈ ಬಾರಿ ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎನ್ನುವ ಆರು ಹೊಸ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, ಆಕರ್ಷಕ ಬೆಲೆಯೊಂದಿಗೆ ಅತಿ ಹೆಚ್ಚು ಫೀಚರ್ಸ್ ಹೊಂದಿರುವ ಸಿ ಸೆಗ್ಮೆಂಟ್ ಎಸ್ ಯುವಿ ಮಾದರಿಯಾಗಿ ಹೊರಹೊಮ್ಮಿದೆ.
ಹಾಗೆಯೇ ಹೊಸ ಕಾರಿನಲ್ಲಿ ಈ ಹಿಂದಿನಂತಯೇ 16 ಇಂಚಿನ ಅಲಾಯ್ ವ್ಹೀಲ್ಸ್, ಹಿಂಬದಿಯಲ್ಲಿ ಹೊಸ ವಿನ್ಯಾಸದ ಟೈಲ್ ಲ್ಯಾಂಪ್ಸ್ ಜೊತೆಗೆ ಎಲ್ಇಡಿ ಸಿಗ್ನೆಚರ್ಸ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗವು ಈ ಬಾರಿ ಸಾಕಷ್ಟು ಪ್ರೀಮಿಯಂ ಆಗಿ ಸಿದ್ದಗೊಂಡಿದೆ. ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ನೊಂದಿಗೆ ಬ್ಲ್ಯಾಕ್ ಅಂಡ್ ಕಾಪರ್ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್, ಡ್ಯುಯಲ್ ಟೋನ್ ಆಸನಗಳು, 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಚಾರ್ಜರ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಡಿಮ್ನಿಂಗ್ ರಿಯಲ್ ವ್ಯೂ ಮಿರರ್, ನಾಲ್ಕು ವಿವಿಧ ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್ಸ್, ಕೀ ಫಾಗ್ ಮತ್ತು ರಿಮೋಟ್ ಸ್ಟಾರ್ಟ್ ನೀಡಲಾಗಿದೆ.
ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ 360 ಡಿಗ್ರಿ ಕ್ಯಾಮೆರಾ, 6 ಏರ್ ಬ್ಯಾಗ್ ಗಳು, ಇಎಸ್ ಸಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್ಸ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ಗಳನ್ನು ಪಡೆದುಕೊಂಡಿದೆ.
ಇನ್ನು ಹೊಸ ಕಾರಿನಲ್ಲಿ ಆ ಹಿಂದಿನಂತೆಯೇ 1.0 ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇವು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 17.4 ರಿಂದ 20 ಕಿ.ಮೀ ಇಂಧನ ದಕ್ಷತೆ ಖಾತ್ರಿಪಡಿಸುತ್ತವೆ. ಈ ಮೂಲಕ ಮ್ಯಾಗ್ನೈಟ್ ಫೇಸ್ಲಿಫ್ಟ್ ಮಾದರಿಯು ರೆನಾಲ್ಟ್ ಕೈಗರ್, ಟಾಟಾ ಪಂಚ್, ಹ್ಯುಂಡೈ ಎಕ್ಸ್ಟರ್, ಮಾರುತಿ ಫ್ರಾಂಕ್ಸ್ ಸೇರಿದಂತೆ ಪ್ರಮುಖ ಮೈಕ್ರೊ ಎಸ್ ಯುವಿ ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.