ಮುಂಬೈ
ಅಧಿಕ ತಾಪಮಾನವಿರುವ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಆರೋಗ್ಯದಲ್ಲಿ ಏರುಪೇರಾದ ಘಟನೆ ಬುಧವಾರ ನಡೆದಿದೆ.
ದೇಶದ ಅನೇಕ ಕಡೆಗಳಲ್ಲಿ ಇನ್ನೂ ಬಿಸಿಲಿನ ವಾತಾವರಣ ಇದ್ದು, ಮಹಾರಾಷ್ಟ್ರ ಇದಕ್ಕೆ ಹೊರತಾಗಿಲ್ಲ. ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಚುನಾವಣಾ ಪ್ರಚಾರದ ವೇಳೆ ನಿತಿನ್ ಗಡ್ಕರಿ ಅವರ ಆರೋಗ್ಯದಲ್ಲಿ ತೊಂದರೆ ಆಗಿದೆ. ಹೀಗಾಗಿ ಅವರು ವೇದಿಕೆ ಮೇಲೆ ಅಸ್ವಸ್ಥರಾದರು.
ಕೂಡಲೇ ವೇದಿಕೆ ಮೇಲಿದ್ದ ಕೇಂದ್ರ ಸಚಿವರ ಅಂಗ ರಕ್ಷಕರು, ಬಿಜೆಪಿ ಮುಖಂಡರು, ಸಿಬ್ಬಂದಿ ಅವರನ್ನು ಕೆಳಗೆ ಬೀಳದಂತೆ ಹಿಡಿದುಕೊಂಡು ಸುರಕ್ಷಿತವಾಗಿ ಕೂರಿಸಿದ್ದಾರೆ. ಮಹಾರಾಷ್ಟ್ರದಲ್ಲಿನ ವಿಪರೀತ ಸೆಕೆಯಿಂದ ನಿತಿನ್ ಗಡ್ಕರಿಗೆ ಹೀಗೆ ತೊಂದರೆ ಆಗಿದೆ. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ ಅವರು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ