4ನೇ ಅವಧಿಗೆ ನಾವು ಬರುವುದಿಲ್ಲ : ನಿತಿನ್‌ ಗಡ್ಕರಿ

ನವದೆಹಲಿ :

   ನಾಲ್ಕನೇ ಅವಧಿಗೆ ನಮ್ಮ ಸರ್ಕಾರ  ಅಧಿಕಾರಕ್ಕೆ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕನೇ ಅವಧಿಗೆ ನಮ್ಮ ಸರ್ಕಾರ ಬರುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ.ಆದರೆ ನೀವು ಮತ್ತೆ ಸಚಿವರಾಗುತ್ತಿರ ಎಂದು ಕೇಂದ್ರ ಸಚಿವ ರಾಮದಾಸ್ ಅತಾವಳೆಗೆ ಹೇಳಿದರು.

   ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಮದಾಸ್ ಅತವಾಳೆ ಕೇಂದ್ರದಲ್ಲಿ ಸಚಿವರಾಗಿದ್ದು, ಅವರ ನಂತರ ಭಾಷಣ ಮಾಡಿದ ಅವರು, ಈ ಹೇಳಿಕೆ ನೀಡಿದ್ದು, ನಂತರ ನಾನು ಇದನ್ನು ತಮಾಷೆಗಾಗಿ ಹೇಳುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.

  ಕೇಂದ್ರದಲ್ಲಿ ಸತತ ಮೂರು ಬಾರಿ ಸಚಿವರಾಗಿರುವ ರಾಮ್ ದಾಸ್ ಅತವಾಳೆ, ಮುಂದಿನ ಬಾರಿಯೂ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ನಾನು ಮತ್ತೆ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಟಾಂಗ್ ನೀಡಿದ ನಿತಿನ್ ಗಡ್ಕರಿ, ನಮ್ಮ ಸರ್ಕಾರ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನೀವು ಮತ್ತೆ ಸಚಿವರಾಗುವುದು ಖಚಿತ ಎಂದು ಹೇಳಿದರು.

   ಮಹಾರಾಷ್ಟ್ರದಲ್ಲಿ ಮಯುತಿ ಮೈತ್ರಿ ಸರ್ಕಾರ ರಚನೆಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆರ್ ಪಿಐ ಪಕ್ಷ ಕನಿಷ್ಠ 10ರಿಂದ 12 ಸ್ಥಾನದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ರಾಮದಾಸ್ ಅತವಾಳೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link
Powered by Social Snap