‘ಯೂಟ್ಯೂಬ್ ನನಗೆ ತಿಂಗಳಿಗೆ 4 ಲಕ್ಷ ರೂ. ಪಾವತಿಸುತ್ತದೆ’- ನಿತಿನ್ ಗಡ್ಕರಿ

ಮುಂಬೈ: 

      ಯೂಟ್ಯೂಬ್ ಈಗ ನನಗೆ ತಿಂಗಳಿಗೆ 4 ಲಕ್ಷ ರೂ.ಗಳನ್ನು ಪಾವತಿಸುತ್ತದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು  ತಿಳಿಸಿದ್ದಾರೆ.

      ನವದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಯ ಪ್ರಗತಿಯನ್ನು ಪರಿಶೀಲಿಸಲು ಹೋಗಿದ್ದ ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಕೋವಿಡ್ ಸಾಂಕ್ರಾಮಿಕ (Covid virus) ರೋಗದ ಸಂದರ್ಭದಲ್ಲಿ ತಾವು ಅನುಭವಿಸಿದ ಅನುಭವಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ತೆರೆದಿಟ್ಟರು ಮತ್ತು ಆ ಸಮಯವನ್ನು ಅವರು ಹೇಗೆ ಬಳಸಿಕೊಂಡರು ಎಂಬುದನ್ನು ಹಂಚಿಕೊಂಡರು.

      ಆ ವೇಳೆ ಅಡುಗೆ ಮಾಡುವುದನ್ನ ಕಲಿತೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆ ವಿಡಿಯೋಗಳನ್ನು ಯೂಟೂಬ್​ಗೆ ಅಪ್​ಲೋಡ್​ ಮಾಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಿ ನನಗೀಗ ಯೂಟೂಬ್​ನಿಂದ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆ ಎಂದು ನಿತಿನ್​ ಗಡ್ಕರಿ ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap