ಪಾಟ್ನಾ:
ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಹೇಳಿದ್ದಾರೆ .
2030ರ ವಿಧಾನಸಭೆ ಚುನಾವಣೆವರೆಗೂ ನಿತೀಶ್ ಕುಮಾರ್ ಅವರಿಗೆ ಸಿಎಂ ಆಗುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಆರೋಗ್ಯವಾಗಿದ್ದಾರೆ, ಅವರ ರಾಜಕೀಯ ಗ್ರಾಫ್ ಕೂಡ ಏರುತ್ತಿದೆ. ಜೆಡಿಯು ಎಂದರೆ ನಿತೀಶ್ ಎಂಬಂತಿದೆ, ಅವರ ನಾಯಕತ್ವಕ್ಕೆ ಯಾವುದೇ ಸವಾಲು ಇಲ್ಲ ಎಂದು ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಹಾಮೈತ್ರಿಕೂಟಕ್ಕೆ ಸೇರುವಾಗ ಜೆಡಿಯು ರಾಷ್ಚ್ರೀಯ ಅಧ್ಯಕ್ಷ ಲಲನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಹೀಗಾಗಿ ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಬಾರದು ಎಂದು ತ್ಯಾಗಿ ಸಲಹೆ ನೀಡಿದ್ದಾರೆ.
ಪಕ್ಷಕ್ಕೆ ಉಪೇಂದ್ರ ಕುಶ್ವಾಹಾ ರಾಜೀನಾಮೆ ನೀಡಿದ ನಂತರ ಚುನಾವಣೆಯಲ್ಲಿ ಜೆಡಿ (ಯು) ಪ್ರದರ್ಶನದ ಪರಿಣಾಮದ ಬಗ್ಗೆ ಮಾತನಾಡಿದ ತ್ಯಾಗಿ ಅವರು, 2010 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿ (ಯು) ಸ್ವಂತವಾಗಿ 118 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷ ಅಧಿಕಾರಕ್ಕೆ ಮರಳಿತ್ತು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ