ನಿಟ್ಟೂರು :
ಗುಬ್ಬಿ ತಾಲ್ಲೂಕು ನಿಟ್ಟೂರು ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ನೂತನ ನಾಡ ಕಛೇರಿ ಕಟ್ಟಡವು ಉದ್ಘಾಟನೆಯಾಗದೇ ಸಾರ್ವಜನಿಕರ ಅನುಕೂಲಕ್ಕೆ ಬಾರದೇ ಅನಾಥವಾಗಿ ಬಿದ್ದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಗ್ರಾಮದ ಗ್ರಾಮ ಲೆಕ್ಕಾಧಿಕಾರಿ, ಆರ್‍ಐ, ಇತರೆ ಅಧಿಕಾರಿಗಳು ಕೆಲಸ ನಿರ್ವಹಿಸುವ ಕಾರ್ಯಾಲಯಗಳ ಕೊಠಡಿಗಳನ್ನು ಒಂದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. ಆದರೇ ಮೇಲಾಧಿಕಾರಿಗಳು ನೂತನವಾಗಿ ನಿರ್ಮಿಸಿರುವ ನಾಡಕಛೇರಿಯ ಕಟ್ಟಡವನ್ನು ಉದ್ಘಾಟನೆ ಮಾಡದೇ ಸಾರ್ವಜನಿಕ ಕೆಲಸಗಳಿಗೆ ಬಕೆಯಾಗಲು ಸ್ಪಂದಿಸದೇ ಅಸಡ್ಡೆ ತೋರಿದ್ದಾರೆಂದು ನಾಗರಿಕರು ಆರೋಪಿಸಿದ್ದಾರೆ
ಸಾರ್ವಜನಿಕರು ಪ್ರತಿದಿನ ಒಂದಲ್ಲ ಒಂದು ಕೆಲಸಕ್ಕೆ ನಾಡ ಕಛೇರಿಗೆ ಬರುತ್ತಾರೆ. ಇಲ್ಲಿ ಸ್ಥಳೀಯ ಹಂತದ ಪ್ರತಿ ಅಧಿಕಾರಿಗಳಿಗೂ ಕರ್ತವ್ಯವಿದ್ದು, ಎಲ್ಲರಿಗೂ ನೂತನ ಕಛೇರಿಯಲ್ಲಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ನಾಗರಿಕರು ತಮ್ಮ ಕೆಲಸಗಳಿಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆಯುವುದುದು ತಪ್ಪುತ್ತದೆ. ಸದ್ಯ ಉದ್ಘಾಟನೆಯಾಗದ ನಾಡ ಕಛೇರಿಯ ನೂತನ ಕಟ್ಟಡವು ಪುಂಡು ಪೋಕರಿಗಳ, ಕುಡುಕರ, ಬೀದಿ ನಾಯಿಗಳ ವಾಸ ಸ್ಥಾನವಾಗುತ್ತಿದ್ದು, ಹೀಗೆ ನಿರ್ಲಕ್ಷ್ಯ ವಹಿಸಿದರೇ ಹೊಸ ಕಟ್ಟಡ ಅವನತಿಯತ್ತ ಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಾಡ ಕಚೇರಿಯ ಹೊಸ ಕಟ್ಟಡವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವಾಗುವಂತೆ ಶೀಘ್ರ ಕ್ರಮ ಕೈಗೊಳ್ಳಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ