ನಿಟ್ಟೂರು :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಬೀದಿನಾಯಿಗಳ ಕಾಟಕ್ಕೆ ಗ್ರಾಮದ ಜನತೆ ತತ್ತರಿಸಿಹೋಗಿದ್ದಾರೆ.
ಗ್ರಾಮದಲ್ಲಿ 300 ಕ್ಕೂ ಹೆಚ್ಚಿರುವ ಬೀದಿನಾಯಿಗಳ ಅಬ್ಬರ ಹೆಚ್ಚಾಗಿದೆ. ಇವುಗಳ ಹಾವಳಿಗೆ ಮಕ್ಕಳು ಬೆದರಿಹೋಗಿದ್ದು, ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ಬೀದಿನಾಯಿಗಳು ಹಿಂಡು ಹಿಂಡಾಗಿ ಸಾರ್ವಜನಿಕರ ಸಂಚಾರದಲ್ಲಿ ದಿಢೀರನೆ ನುಗ್ಗಿ ಪೇಚಾಟದಲ್ಲಿ ಸಿಲುಕಿದ್ದಾರೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಬೀದಿನಾಯಿಗಳನ್ನು ಹಿಡಿಸಿ ಹೊರ ಹಾಕಿಸಿ ತಮಗೆ ಮುಕ್ತಿ ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಹಗಲು – ರಾತ್ರಿ ಬೀದಿ ನಾಯಿಗಳ ಕೂಗಾಟಕ್ಕೆ ಸ್ಥಳೀಯರು ನಿದ್ದೆಯಿಲ್ಲದೆ ಬೇಸತ್ತು ಹೋಗಿದ್ದಾರೆ. ಹೆದ್ದಾರಿಗಳಲ್ಲೂ ಬೀದಿನಾಯಿಗಳು ಗುಂಪು ಗುಂಪಾಗಿ ನಿಂತು ವಾಹನ ಸಂಚಾರಕ್ಕೂ ಅಡ್ಡಿಪಡಿಸುತ್ತಿರುವುದು ನೋಡುಗರಿಗೆ ಕಂಡು ಬಂದಿದೆ. ಅಡ್ಡಲಾಗಿ ಬೀದಿನಾಯಿಗಳು ನುಗ್ಗಿ ದ್ವಿಚಕ್ರ ವಾಹನ ಸವಾರರು ನೆಲಕ್ಕುರುಳಿದ ಪ್ರಸಂಗಗಳು ನಡೆದಿವೆ.
ನಿಟ್ಟೂರು ತಕ್ಷಣ ಗ್ರಾಮ ಪಂಚಾಯ್ತಿ ಆಡಳಿತ ವರ್ಗ, ತಾಲ್ಲೂಕು ಅಧಿಕಾರಿಗಳು ಕಣ್ತೆರೆದು ಬೀದಿನಾಯಿಗಳ ಹಾವಳಿ ತಪ್ಪಿಸುವರೇ ಕಾದು ನೋಡಬೇಕಿದೆ ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ