ನಿಟ್ಟೂರು :
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಗ್ರಾಮದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಕೊರೋನ ಲಸಿಕೆ ಹೆಚ್ಚುವರಿಯಾಗಿ ಬಿಡುಗಡೆಯಾಗದೆ ಸಾರ್ವಜನಿಕರು ಲಸಿಕೆಗಾಗಿ ಪರದಾಡುತ್ತಿರುವ ದುಸ್ಥಿತಿ ಎದುರಾಗಿದೆ.
ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡುವ 1 ಮತ್ತು 2 ನೇ ಲಸಿಕೆಗಾಗಿ ಕಿಕ್ಕಿರಿದು ಸೇರಿದ ಜನತೆ ಸಮರ್ಪಕವಾಗಿ ಲಸಿಕೆ ದೊರೆಯದೆ ವಾಪಸ್ಸಾಗಿರುವ ದೃಶ್ಯ ಕಂಡುಬಂದಿದೆ ನಿಟ್ಟೂರು ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಕೊರೋನ ಡೋಸ್ 100 ರಿಂದ 150 ಮಂದಿಗೆ ಮಾತ್ರ ಸಿಗುತ್ತದೆ . ಬೆಳಿಗ್ಗೆಯಿಂದ ಕಾದು ಕೂತರು ಉಳಿದವರು ಕೊರೋನಾ ಡೋಸ್ ದೊರೆಯದೆ ನಿರಾಶೆಯಿಂದ ಹಿಂತಿರುಗಿದ್ದಾರೆ.
ನಿಟ್ಟೂರು ಹೋಬಳಿ ಪ್ರಮುಖ ಕೇಂದ್ರವಾಗಿರುವುದರಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಕೊರೋನಾ ಲಸಿಕೆ ಬಿಡುಗಡೆಯಾಗಬೇಂದು ಸಾರ್ವಜನಿಕರ ಒತ್ತಾಯವಾಗಿದೆ.ಕೊರೋನ ಲಸಿಕೆ ಬಂತೆಂದರೆ ಗ್ರಾಮದ ಗ್ರಾಮಸ್ಥರು ಸ್ಭೆರಿದಂತೆ ಹಳ್ಳಿಗಳ ಜನತೆಯು ಜಮಾಯಿಸಿ ಬಿಟ್ಟಿರುತ್ತದೆ.
ಕೊರೋನಾ ಲಸಿಕೆ ಪ್ರತಿಯೊಬ್ಬರಿಗು ಸಿಗಲು ಹೆಚ್ಚುವರಿ ಲಸಿಕೆ ಬಿಡುಗಡೆಗಾಗಿ ಜಿಲ್ಲಾ ಆರೋಗ್ಯಾದಿಕಾರಿಗಳು ತಕ್ಷಣ ಗಮನ ಹರಿಸಬೇಕೇಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ