ಅಲಕಾಪುರ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಟೆಂಪರರಿ ನೋ ಫ್ಲೈ ಝೋನ್

ಚಿಕ್ಕಬಳ್ಳಾಪುರ: 

    ಇಂದು ಗೌರಿಬಿದನೂರು ತಾಲ್ಲೂಕು, ಹನುಮೇನಹಳ್ಳಿ ಗ್ರಾಮದ ಬಳಿ ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಸೋಲಾರ್ ಪ್ಲಾಂಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟನೆ ಮಾಡಲಿರುವ ಕಾರಣ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿ ನಲ್ಲಿ ಅಲಕಾಪುರ ಗ್ರಾಮದ ಸುತ್ತ ಮುತ್ತ 10ಕಿ.ಮೀ. ವ್ಯಾಪ್ತಿಯಲ್ಲಿ ನೋ ಫ್ಲೈ ಝೋನ್ ವಲಯ ಎಂದು ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

    ಗೌರಿಬಿದನೂರು ನಗರದ ನೇತಾಜಿ ಕ್ರೀಡಾಂಗಣದಲ್ಲಿ ಪಿ.ಎಂ. ಕುಸುಮ್ ಕಾಂಪೋನೆAಟ್-ಸಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಜೂನ್ 11ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ಗಳು ನಡೆಯದಂತೆ ಭದ್ರತಾ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

    ಮಾನವ ರಹಿತ ವೈಮಾನಿಕ ವಾಹನಗಳು, ರೊಬೋಟಿಕ್ ಆಟೋಮೇಷನ್ ವಾಹನಗಳು, ಪ್ಯಾರಾ ಗ್ಲೈಡರ್‌ಗಳು, ಮೈಕ್ರೋ ಲೈಟ್‌ಗಳು, ಸಣ್ಣ ವಿಮಾನಗಳು ಮತ್ತು ಡ್ರೋನ್‌ಗಳ ಹಾರಾಟವನ್ನು ಗೌರಿಬಿದನೂರು ತಾಲ್ಲೂಕು ಅಲಕಾಪುರ ಕೆ.ಹೆಚ್.ಸಿ ಹೆಲಿಪ್ಯಾಡ್ ನಿರ್ಮಾಣ ಸ್ಥಳದ ಸುತ್ತಮುತ್ತಲು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023ರ ಕಲಂ 163 ರನ್ವಯ ತಾತ್ಕಾಲಿಕ ಹಾರಾಟ ನಿಷೇಧ ವಲಯ ಟೆಂಪರರಿ ನೊ ಫ್ಲೈ ಝೋನ್ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಎನ್. ರವೀಂದ್ರ ಘೋಷಿಸಿ ಆದೇಶಿಸಿದ್ದಾರೆ.

Recent Articles

spot_img

Related Stories

Share via
Copy link