ಯಾವುದೇ ಗ್ಯಾರೆಂಟಿ ಅಥವಾ ಜನಪ್ರಿಯ ಘೋಷಣೆಗಳಿಲ್ಲದ ಬಜೆಟ್‌ ಮಂಡಿಸಿದ ಕೇಂದ್ರ….!

ದೆಹಲಿ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸುತ್ತಿದ್ದಾರೆ. ಬಜೆಟ್ ನಲ್ಲಿ ಮುಂದಿನ 5 ವರ್ಷದಲ್ಲಿ 3ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ಗುರಿಯನ್ನ ಹಾಕಿಕೊಂಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಈ ವೇಳೆ ಬಜೆಟ್‌ ಭಾಷಣವನ್ನ ಮುಂದುವರೆಸಿದ ಅವರು, ಸೋಲಾರ್ ಮೂಲಕ ಪ್ರತಿಮನೆಗೂ ವಿದ್ಯುತ್, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಿಬ್ಬಂದಿಗ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ 2024 ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಳಗೊಳ್ಳುವ ವಿಧಾನವನ್ನು ಎತ್ತಿ ಹೇಳಿದ್ದಾರೆ. ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಸರ್ಕಾರದ ಗಮನ ಇದೆ ಮತ್ತು ಅವರ ಅಗತ್ಯಗಳು ಅದರ ಹೆಚ್ಚಿನ ಆದ್ಯತೆಗಳಾಗಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಬಜೆಟ್ ಅನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್, ದೇಶದ ಜನರು ತಮ್ಮ ಸರ್ಕಾರವನ್ನು ಮೂರನೇ ಅವಧಿಗೆ ಆಶೀರ್ವದಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದರು.

    ನಮ್ಮ ಯುವ ದೇಶವು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿದೆ, ಅದರ ವರ್ತಮಾನದ ಬಗ್ಗೆ ಹೆಮ್ಮೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಭರವಸೆ ಮತ್ತು ವಿಶ್ವಾಸವನ್ನು ಹೊಂದಿದೆ. ನಮ್ಮ ಸರ್ಕಾರವು ತನ್ನ ಅತ್ಯದ್ಭುತ ಕೆಲಸದ ಆಧಾರದ ಮೇಲೆ ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣ ಆರಂಭಿಸಿದ್ದಾರೆ.

    ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಳಗೊಳ್ಳುವಿಕೆ ಮತ್ತು ರಚನಾತ್ಮಕ ಸುಧಾರಣೆಗಳು, ಜನಪರ ಕಾರ್ಯಕ್ರಮಗಳು ಮತ್ತು ಉದ್ಯೋಗಾವಕಾಶಗಳ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು, ಭಾರತೀಯ ಆರ್ಥಿಕತೆಯು ಹೊಸ ಚೈತನ್ಯವನ್ನು ಪಡೆಯಲು ಸಹಾಯ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

    ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ತ್ರಿವಳಿ ತಲಾಖ್ ಅನ್ನು ಅಪರಾಧೀಕರಿಸುವುದು ಮತ್ತು ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಶಾಸಕಾಂಗ ಸ್ಥಾನಗಳನ್ನು ಹಂಚಿಕೆ ಮಾಡುವಂತಹ ಕ್ರಮಗಳು ಕಾನೂನು ಮತ್ತು ರಾಜಕೀಯ ಕ್ರಮಗಳ ಮೂಲಕ ಮಹಿಳಾ ಸಬಲೀಕರಣದ ಕುರಿತು ಮುನ್ನಡೆಸುವ ಸರ್ಕಾರದ ಬದ್ಧತೆಯನ್ನು ನಿರೂಪಿಸುತ್ತವೆ ಎಂದು ಹೇಳಿದರು.

    1.4 ಕೋಟಿ ಯುವಕರು ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ. ಭಾರತದ ಯುವಕರ ಕೌಶಲ್ಯವನ್ನು ಹೆಚ್ಚಿಸಲು ಸರ್ಕಾರದ ಪ್ರಮುಖ ಯೋಜನೆ ಕುರಿತು ನಿರ್ಮಲಾ ಸೀತಾರಾಮನ್ ಅವರು ಸ್ಕಿಲ್ ಇಂಡಿಯಾ ಮಿಷನ್ ರಾಷ್ಟ್ರದ 1.4 ಕೋಟಿ ಯುವ ವ್ಯಕ್ತಿಗಳಿಗೆ ಯಶಸ್ವಿಯಾಗಿ ತರಬೇತಿ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿದೆ ಎಂದು ಹೇಳಿದರು.

    ನಮ್ಮ ಸರ್ಕಾರವು ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಉಳಿಸಿಕೊಳ್ಳುವ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳುತ್ತದೆ, ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗುತ್ತದೆ, ಉತ್ಪಾದಕತೆಯನ್ನು ಸುಧಾರಿಸುತ್ತದೆ, ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸುತ್ತದೆ, ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap