ಆರ್​ಜೆ ರಚನಾ ಇನ್ನಿಲ್ಲ: ಲಕ್ಷಾಂತರ ಜನರ ಮನ ಗೆದ್ದಿದ್ದ ಮಾತಿನ ಮಲ್ಲಿಗೆ ಹೃದಯಾಘಾತ

ಬೆಂಗಳೂರು:

 ರೇಡಿಯೋ ಜಾಕಿಯಾಗಿ ಅಸಂಖ್ಯಾತ ಜನರ ಮನಗೆದ್ದಿದ್ದ ಆರ್​ಜೆ ರಚನಾ ಇನ್ನಿಲ್ಲ. ಮಂಗಳವಾರ 39 ವರ್ಷದ ರಚನಾ, ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ರೇಡಿಯೋ ಮಿರ್ಚಿಯಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ರಚನಾ, ತನ್ನ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದರು.

ಫಟಾಫಟ್​ ಮಾತಿನ ಮೂಲಕ ಜನರ ಮನಗೆದ್ದಿದ್ದ ಮುದ್ದು ಮುಖದ ರಚನಾ, 7 ವರ್ಷ ಆರ್​ಜೆ ಆಗಿ ಕೆಲಸ ಮಾಡಿದ್ದರು. ರಾಜ್ಯಾದ್ಯಂತ ಮನೆಮಾತಾಗಿದ್ದ ರಚನಾ, ಬಹಳ ಚಿಕ್ಕ ವಯಸ್ಸಿಗೇ ಬದುಕಿನ ಪಯಣ ಮುಗಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದ ರಚನಾ, ಇತ್ತೀಚಿಗೆ ಜೆಪಿ ನಗರದ ಅಪಾರ್ಟ್​ಮೆಂಟ್​ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಮಂಗಳವಾರ ಮನೆಯಲ್ಲೇ ಹೃದಯಾಘತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.

ರಕ್ಷಿತ್​ ಶೆಟ್ಟಿ ನಟನೆಯ ‘ಸಿಂಪಲ್ಲಾಗಿ ಒಂದ್​ ಲವ್​ ಸ್ಟೋರಿ’ ಸಿನಿಮಾದಲ್ಲಿ ಆರ್​ಜೆ ರಚನಾ ಸಹೋದರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರೇಡಿಯೋ ಸಿಟಿ, ರೇಡಿಯೋ ಮಿರ್ಚಿ ಸೇರಿದಂತೆ ಮುಂತಾದ ಎಫ್​ಎಂಗಳಲ್ಲಿ ಆರ್​ಜೆ ಆಗಿ ಕೆಲಸ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap