2 ಸಲ ಸೋತವರಿಗೆ ಬೇಡ ಟಿಕೆಟ್; ಹೊಸಬರಿಗೆ ಅವಕಾಶ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಒತ್ತಾಯ

ಹಿಂದಿನ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವವರಿಗೆ ಈ ಬಾರಿ ಟಿಕೆಟ್ ನೀಡುವುದು ಅನುಮಾನ ಎಂಬ ಬಗ್ಗೆ ಆಡಳಿತಾರೂಢ ಬಿಜೆಪಿ ಜತೆಗೆ ಪ್ರತಿಪಕ್ಷ ಕಾಂಗ್ರೆಸ್ ಪಾಳಯದಲ್ಲೂ ಜೋರಾಗಿ ಚರ್ಚೆ ನಡೆಯುತ್ತಿವೆ.

ಪಕ್ಷದ ಕಾರ್ಯಕರ್ತರ ವಲಯದಲ್ಲೂ ಹೊಸ ಮುಖಗಳಿಗೆ ಮಣೆ ಹಾಕುವಂತೆ ಒತ್ತಾಯ ಕೇಳಿಬಂದಿದೆ. ಇದು ವಿಧಾನಸಭೆ ಚುನಾವಣೆಗೆ ತಾಲೀಮು ಶುರುವಾಗಿರುವ ಹೊತ್ತಿನಲ್ಲಿ ಎರಡೂ ಪಕ್ಷದೊಳಗೆ ಸಂಚಲನಕ್ಕೆ ಕಾರಣವಾಗಿದೆ. ಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಲು ಬಿಜೆಪಿ ಮತ್ತು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿವೆ.

ಇಂದಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹತ್ವದ ಸಭೆಗಳನ್ನು ನಡೆಸಿ ಮಿಷನ್-150 ಟಾರ್ಗೆಟ್ ಕೊಟ್ಟು, ಮತಬೇಟೆಗೆ ತಕ್ಷಣ ಸಜ್ಜಾಗುವಂತೆ ನಿರ್ದೇಶನ ನೀಡಿದ್ದಾರೆ. ಬೆನ್ನಲ್ಲೇ ಎರಡೂ ಪಕ್ಷಗಳ ರಾಜ್ಯ ನಾಯಕರು ಗೆಲ್ಲುವ ಕುದುರೆಗಳತ್ತ ದೃಷ್ಟಿ ಹಾಯಿಸಿದ್ದಾರೆ. ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಯನ್ನು ಅಖಾಡಕ್ಕಿಳಿಸುವ ಮಾನದಂಡಗಳಲ್ಲಿ ಎರಡು ಸಲ ಸೋತವರಿಗೆ ಅವಕಾಶ ಬೇಡ ಎಂಬುದನ್ನು ಸೇರಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.

ಇದು ಟಿಕೆಟ್ ಮೇಲೆ ಕಣ್ಣಿಟ್ಟಿರುವ ಹೊಸ ಆಕಾಂಕ್ಷಿಗಳಲ್ಲಿ ಹುರುಪು ತಂದರೆ, ಎರಡು ಸಲ ಸೋತು ಈಗ ಮತ್ತೊಂದು ಕೈ ನೋಡೋಣ ಎಂಬ ಸಿದ್ಧತೆಯಲ್ಲಿ ತೊಡಗಿದ್ದವರಲ್ಲಿ ತಳಮಳ ಮೂಡಿಸಿದೆ. ಒಂದೊಮ್ಮೆ ಇವರಿಗೆ ಟಿಕೆಟ್ ಕಟ್ ಮಾಡಿದರೆ ಪಕ್ಷದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಹೆಜ್ಜೆ ಇಡುವುದು ಸವಾಲಿನ ಕೆಲಸವೇ ಸರಿ. ಈ ಹಿನ್ನೆಲೆಯಲ್ಲಿ ಇಂಥವರಿಗೆ ಟಿಕೆಟ್ ಕೊಡಬೇಕಾ? ಬಿಡಬೇಕಾ? ಎಂಬುದು ಇನ್ನೂ ಚರ್ಚೆ ಹಂತದಲ್ಲಿದೆ. ಮೂಲಗಳ ಪ್ರಕಾರ, ರಾಜ್ಯದಲ್ಲಿ ಎರಡ್ಮೂರು ಸಲ ಸೋತು, ಈಗ ಮತ್ತೆ ಟಿಕೆಟ್ ಮೇಲೆ ಕಣ್ಣಿಟ್ಟವರ ಸಂಖ್ಯೆ ನೂರರ ಆಸುಪಾಸಿದೆ ಎಂದು ಅಂದಾಜಿಸಲಾಗಿದೆ.

ಜಗನ್‌ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ

ಮಿಷನ್-150 ಗುರಿ ತಲುಪುವುದೇ ನಮ್ಮೆಲ್ಲ್ಲ ಏಕೈಕ ಅಜೆಂಡಾ. ಎರಡು ಸಲ ಸೋತವರ ಬದಲು ಹೊಸಬರಿಗೆ ಮನ್ನಣೆ ನೀಡಿದರೆ ಉತ್ತಮ ಎಂಬ ಚರ್ಚೆ ಕಾರ್ಯಕರ್ತರ ಮಟ್ಟದಲ್ಲಿ ನಡೆದಿದೆ. ಏನಿದ್ದರೂ ವರಿಷ್ಠರು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ.ಈಶ್ವರಸಿಂಗ್ ಠಾಕೂರ್ ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ

ಸತತವಾಗಿ ಸೋತವರಿಗಿಂತ ಪಕ್ಷದಲ್ಲಿ ಸಕ್ರಿಯ, ಕ್ರಿಯಾಶೀಲವಾಗಿ ಕೆಲಸ ಮಾಡುವವರು, ಯುವಕರನ್ನು ಗುರುತಿಸಿ ಟಿಕೆಟ್ ಕೊಡುವ ಅಗತ್ಯವಿದೆ. ರಾಹುಲ್ ಗಾಂಧಿ ನೀಡಿರುವ ಮಿಷನ್-150 ಸಾಕಾರವಾಗುವಲ್ಲಿ ಅನುಮಾನವೇ ಇಲ್ಲ.ಆನಂದ ದೇವಪ್ಪ ಕಾಂಗ್ರೆಸ್ ಡಿಜಿಟಲ್ ಅಭಿಯಾನ ಸಮಿತಿ ರಾಜ್ಯ ಸದಸ್ಯ

ಆಮ್​ ಆದ್ಮಿ ರೀ ಎಂಟ್ರಿ ಯಾರಿಗೆ ಆಪತ್ತು?: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ನೆಲೆ

ನಡ್ಡಾ ಭೇಟಿಯಾದ ಬೊಮ್ಮಾಯಿ

ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳಿಂದ ಭಾರಿ ಒತ್ತಡವಿದ್ದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ರಾಜ್ಯಕ್ಕೆ ವಾಪಸಾದ ಬಳಿಕ ಅಂತಿಮ ಪಟ್ಟಿಯೊಂದನ್ನು ಕಳುಹಿಸಿ ಕೊಡಿ, ನಾವು ಪರಿಶೀಲಿಸಿ ಅಂತಿಮಗೊಳಿಸುತ್ತೇವೆ ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತರು ಹೇಳುತ್ತಾರೆ. ಚುನಾವಣೆಗೆ ಒಂದು ವರ್ಷವೂ ಇಲ್ಲ.

ಹೀಗಾಗಿ ಪುನಾರಚನೆ ಮಾಡಿದರೆ ವಿನಾಕಾರಣ ಅತೃಪ್ತಿ, ಅಸಮಾಧಾನಗಳಿಗೆ ಕಾರಣವಾಗುತ್ತದೆ. ಮತ್ತೆ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿ ಅದನ್ನು ಸರಿ ಮಾಡುತ್ತಾ ಕೂರಬೇಕು. ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವುದು ಸೂಕ್ತ ಎಂದು ಸಿಎಂ ತಮ್ಮ ಆಪ್ತರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ವರಿಷ್ಠರ ಭೇಟಿ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ತೆರಳಿದ ಬೊಮ್ಮಾಯಿ, ಅವರೊಂದಿಗೂ ವಿಸõತ ಮಾತುಕತೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap