ವೀಕೆಂಡ್ ಕರ್ಫ್ಯೂ ಅವಶ್ಯಕತೆಯಿಲ್ಲ: ಪರಮೇಶ್ವರ

ತುಮಕೂರು:

ಸರ್ವಪಕ್ಷ ಸಭೆಯಿರಲಿ, ಡೆಮಾಕ್ರಸಿಯೇ ಬಿಜೆಪಿಗೆ ಗೊತ್ತಿಲ್ಲ 

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆಯಿಲ್ಲ. ಕರ್ಫ್ಯೂ ಮಾಡುವುದರಿಂದ ಯಾರಿಗೂ ಉಪಯೋಗವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಸರಕಾರಕ್ಕೆ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ ಅಪ್ರಯೋಜಕವೆನ್ನುವುದು ಸಾಬೀತಾಗಿದೆ. ಕರ್ಫ್ಯೂ ಹೇರಿಕೆಯಿಂದ ಆರ್ಥಿಕ ಚಟುವಟಿಕೆಗಳೇ ಸ್ಥಗಿತಗೊಳ್ಳಲಿದ್ದು, ಬೀದಿ ಬದಿ ಹೂವ್ವು, ತರಕಾರಿ, ಹಣ್ಣು ಮಾರುವವರು, ಕೂಲಿ ಕಾರ್ಮಿಕರ ಜೀವನ ಏನಾಗಬೇಕು? ದುಡಿದು ತಿನ್ನುವವರ ಬದುಕನ್ನು ಕಸಿದುಕೊಂಡರೆ ಸರಕಾರ ಏನುಸಾಧನೆ ಮಾಡಿದಂತಾಗಿದೆ.

ಕೂಡಲೇ ವೀಕೆಂಡ್ ಕರ್ಫ್ಯೂ ಹಿಂಪಡೆದು, ವ್ಯಾಕ್ಸಿನೇಶನ್, ಸಾಮಾಜಿಕ ಅಂತರಗಳ ಬಗ್ಗೆ ಗಮನಹರಿಸಲಿ. ಆರೋಗ್ಯ ಕ್ಷೇತ್ರಕ್ಕೆ ಪ್ರಾತಿನಿಧ್ಯ ಕಲ್ಪಿಸಿ ಸೌಲಭ್ಯ ನಿರ್ಮಿಸಲು ಕ್ರಮವಹಿಸಬೇಕು ಎಂದರು.

ಯಾವುದೇ ಸಮಸ್ಯೆ ಎದುರಾದಾಗ ಆ ಸಂಬಂಧ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿ ಸಲಹೆ ಪಡೆಯಲಾಗುತ್ತಿತ್ತು. ಬಿಜೆಪಿಯವರಿಗೆ ಡೆಮಾಕ್ರಸಿಯೇ ಗೊತ್ತಿಲ್ಲ. ತಮಗೆ ತೋಚಿದಂತೆ ನಿರ್ಬಂಧಗಳನ್ನು ಹೇರಿ ಜನಸಾಮಾನ್ಯರನ್ನು ತೊಂದರೆಗೀಡುಮಾಡುತ್ತಿದ್ದಾರೆ. ಕೋವಿಡ್ ಬಂದು 3 ವರ್ಷ ಆಯಿತು.

ಒಂದೇ ಒಂದು ಸರ್ವ ಪಕ್ಷ ಸಭೆ ಕರೆಯಲು ಸಾಧ್ಯವಾಗಿಲ್ಲ. ನಾನು ಸಹ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ವಿದ್ಯಾಸಂಸ್ಥೆ ನಡೆಸುತ್ತಿದ್ದೇನೆ. ಸೋಂಕು ಬಂದವರು, ಸಂಪರ್ಕಿತರನ್ನು ಐಸೋಲೇಟ್ ಮಾಡಬೇಕು. ಎದುರಾಗುವ ಸವಾಲುಗಳನ್ನು ಸೂಕ್ಷ್ಮತೆಯಿಂದ ನಿರ್ವಹಿಸಬೇಕು ಎಂದರು.

ಶಿಕ್ಷಣ ಕ್ಷೇತ್ರ 3 ವರ್ಷದಿಂದ ವಿನಾಶದತ್ತ:

ಶಿಕ್ಷಣ ಕ್ಷೇತ್ರ ಕಳೆದ 3 ವರ್ಷಗಳಿಂದ ನಾಶವಾಗುತ್ತಿದೆ. ಪರೀಕ್ಷೆ ಇಲ್ಲದೆ ಮೌಲ್ಯಮಾಪನವಿಲ್ಲದೆ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗಿದೆ. ದೇಶದ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯ. ಸರಕಾರದ ನಿರ್ಧಾರಗಳು ಸರಿಕಾಣುತ್ತಿಲ್ಲ. ಇದಕ್ಕೆ ಅಧ್ಯಯನ ಮಾಡಿ ನಿಯಮ ಮಾಡ್ಬೇಕು ಎಂದು ಸಲಹೆ ನೀಡಿದರು.

ಇದನ್ನು ಸರಕಾರ ಎನ್ನಬೇಕೆ?:

ಸಂಪುಟ ಪುನರ್‍ರಚನೆ ಅವರ ಆಂತರಿಕ ವಿಷಯ. ಆದರೆ ಪದೇ ಪದೇ ಮಂತ್ರಿಗಳ ಬದಲಾವಣೆಯಿಂದ ಆಡಳಿತ ಹಳಿ ತಪುತ್ತ್ತದೆ. ಶೇ.40% ಭ್ರಷ್ಟಾಚಾರದ ಆರೋಪವನ್ನೇ ನೊಂದಾಯಿತ ಗುತ್ತಿಗೆದಾರರ ಸಂಘಟನೆಯವರೇ ಬಿಜೆಪಿ ಸರಕಾರದ ಮೇಲೆ ಮಾಡುತ್ತಿದ್ದು, ಸಾವಿರಾರು ಕೋಟಿ ಗುತ್ತಿಗೆ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಸರಕಾರದಲ್ಲಿ ಹಣವಿಲ್ಲ, ಆಡಳಿತ ನಡೆಯುತ್ತಿಲ್ಲ. ಇದನ್ನು ಸರಕಾರ ಅಂಥಾ ಹೇಳ್ಬೇಕಾ ಎಂದ ಪ್ರಶ್ನಿಸಿದ ಪರಮೇಶ್ವರ ಅವರು ಕೋವಿಡ್ ತಗ್ಗಿದ ಮೇಲೆ ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಲಾಗುವುದು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಸಮಾಲೋಚಿಸಿದ್ದಾರೆಂದರು.

ಕನ್ನಡವನ್ನು ಅಲಕ್ಷಿಸಿ ಸಂಸ್ಕøತ ವಿಜೃಂಭಣೆಗೆ ವಿರೋಧ:

ಸಂಸ್ಕøತ ಭಾಷೆ ಕಲಿಕೆಗೆ ತಮ್ಮ ವಿರೋಧವಿಲ್ಲ ಆದರೆ ಮಾತೃಭಾಷೆ ಕನ್ನಡವನ್ನು ಅಲಕ್ಷಿಸಿ ಸಂಸ್ಕøತವನ್ನು ವಿಜೃಂಭಿಸಬಾರದು ಎಂದು ಪ್ರತಿಕ್ರಿಯಿಸಿದ ಪರಮೇಶ್ವರ ಅವರು 2000 ವರ್ಷಗಳಿಗೂ ಪ್ರಾಚೀನ ಇತಿಹಾಸದ ಮಹಾಭಾರತದಲ್ಲೂ ಕರುನಾಡೆಂದು ಉಲ್ಲೇಖವಿರುವ ಕನ್ನಡಕ್ಕೆ ಕರ್ನಾಟಕದಲ್ಲಿ ಎಂದಿಗೂ ಅಗ್ರಮಾನ್ಯ ಸ್ಥಾನ ಸಿಗಬೇಕು.

ಕನ್ನಡ ಬಹುಜನರು ಆಡುವ ಭಾಷೆ. ಸಂಸ್ಕøತ ಕೆಲವೇ ವರ್ಗದವರು ಆಡುವ ಭಾಷೆ. ಒಂದು ಕಾಲದಲ್ಲಿ ಸಂಸ್ಕøತ ಗೊತ್ತಿಲ್ಲದವರು ಅಪ್ಪಿ ತಪ್ಪಿ ಕೇಳಿದರೂ ಕಿವಿಗೆ ಸೀಸ ಉಯ್ಯುತ್ತಿದ್ದರು ಎಂಬ ಮಾತು ಪ್ರಚಲಿತದಲ್ಲಿತ್ತು. ಇವತ್ತು ಅಂತಹಸ್ಥಿತಿಯಿಲ್ಲ. ಆದರೆ ನಾವು ನಿರೀಕ್ಷಿಸಿದಷ್ಟು ವಸ್ತುಸ್ಥಿತಿ ಏನು ಬದಲಾಗಿಲ್ಲ. 21ನೇ ಶತಮಾನದಲ್ಲಿ ಕೂಡ ಸಂಸ್ಕøತ ಕೆಲವರ ಭಾಷೆಯಾಗಿದೆ.

ಸಂಸ್ಕøತ ಎಲ್ಲರ ಭಾಷೆಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಇಟ್ಟುಕೊಂಡು ಸರಕಾರ ಸಂಸ್ಕøತ ವಿವಿ ಬೆಳೆಸುವುದಾದರೆ ಸ್ವಾಗತಿಸುತ್ತೇನೆ. ಕೇಂದ್ರದಂತೆ ಕನ್ನಡ ವಿರೋಧಿ ಧೋರಣೆಯಿಂದ ಈ ಕ್ರಮ ಕೈಗೊಂಡಿದ್ದರೆ ಖಂಡಿತಾ ವಿರೋಧಿಸುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಹಾಜರಿದ್ದರು.

ನಾರಾಯಣಗುರು ಟ್ಯಾಬ್ಲೋ ತಿರಸ್ಕøತದಿಂದ ಐಕ್ಯತೆಗೆ ಧಕ್ಕೆ

ಬಸವಣ್ಣ, ಭಗವಾನ್ ಬುದ್ದ, ನಾರಾಯಣಗುರು ಇವರೆಲ್ಲರದ್ದು ಮನುಷ್ಯನಿಗೆ ಒಂದು ರೀತಿಯ ಸಮಾನತೆ ಕೊಡಬೇಕೆಂಬ ಚಿಂತನೆ ಉಳ್ಳುವರು. ಅಂದಿನ ಕಾಲಘಟ್ಟದಲ್ಲಿ ದೇವಸ್ಥಾನಕ್ಕೆ ತಳ ಸಮುದಾಯದವರನ್ನು ಬಿಡದೆ ಇರುವುದನ್ನು ಕಂಡು ತಾವೇ ವಿಭಿನ್ನ ಪ್ರಯತ್ನ ಮಾಡಿ ನಾರಾಯಣಗುರು ಸಮಾಜಕ್ಕೆ ಆದರ್ಶವಾದರು.

ಅವರ ಸಂದೇಶ ಇಡೀ ದೇಶಕ್ಕೆ ಪರಿಚಯವಾಗಬೇಕು. ಟ್ಯಾಬ್ಲೊ ಮಾಡಿ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಹಾಕಿ ಕೇಂದ್ರದವರು ಕಾರಣವೂ ಇಲ್ಲದೆ ತಿರಸ್ಕಾರ ಮಾಡುತ್ತಾರೆಂದರೆ ಅದ ಕೇರಳ ಸರಕಾರಕ್ಕೆ ಮಾಡಿದ ಅವಮಾನವಲ್ಲ.

ಸಂತ ನಾರಾಯಣಗುರು ಮತ್ತವರ ಆದರ್ಶಗಳಿಗೆ ಮಾಡಿದ ಅವಮಾನ. ತಿರಸ್ಕಾರದ ಭಾವನೆ ಭಾರತದ ಐಕ್ಯತೆ, ಸಾಮಾಜಿಕ ಸಂಘರ್ಷಕ್ಕೆ ನಾಂದಿಯಾಗುತ್ತದೆ. ಕೂಡಲೇ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು.

-ಡಾ.ಜಿ.ಪರಮೇಶ್ವರ, ಮಾಜಿ ಉಪಮುಖ್ಯಮಂತ್ರಿ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link