ಬೆಂಗಳೂರು:
2024ರ ಲೋಕಸಭೆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಮೇಲಿನ ಯಾವ ಅಭ್ಯರ್ಥಿಯೂ ಅಲ್ಲ ಹೆಚ್ಚು ಸದ್ದು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಹೊರತಾಗಿ, ಮೇಲಿನ ಯಾವುದೂ ಇಲ್ಲ ಆಯ್ಕೆಯನ್ನು ಹಲವು ಕ್ಷೇತ್ರಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಒತ್ತಿದ್ದಾರೆ.
ಚುನಾವಣಾ ಆಯೋಗದ ವರದಿ ಪ್ರಕಾರ, 28 ಕ್ಷೇತ್ರಗಳ ಮತದಾನದಲ್ಲಿ ರಾಜ್ಯಾದ್ಯಂತ 2,18,300 ನೋಟಾ ಮತಗಳು ಈ ಬಾರಿ ಬಂದಿವೆ. ಇದು ಒಟ್ಟಾರೆ ಮತದಾನದ ಶೇಕಡಾ 0.56ರಷ್ಟು ಹಂಚಿಕೆಯಾಗಿದೆ. 2019 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಅಂದು ರಾಜ್ಯದಲ್ಲಿ 2,50,810 ನೋಟಾ ಮತಗಳು ಬಂದಿದ್ದು ಅದು ಶೇಕಡಾ 0.72ರಷ್ಟು ಮತ ಹಂಚಿಕೆಯಾಗಿತ್ತು.
ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ನೋಟಾ ಮತಗಳು ದಕ್ಷಿಣ ಕನ್ನಡದಲ್ಲಿ (23,576) ನಂತರದ ಸ್ಥಾನದಲ್ಲಿ ಬೆಂಗಳೂರು ಉತ್ತರ (13,554) ಮತ್ತು ಬೆಂಗಳೂರು ಸೆಂಟ್ರಲ್ (12,126) ಆಗಿದೆ. ಚಿಕ್ಕೋಡಿಯಲ್ಲಿ (2,608) ನೋಟಾ ಮತಗಳು ಬಂದಿವೆ.