ಗೂಗಲ್‌ ಪೇ ಬಳಕೆದಾರರೇ ಗಮನಿಸಿ ʼಜ.1ʼರಿಂದ ʼಗೂಗಲ್ ಪೇ ಪಾವತಿʼ ನಿಯಮದಲ್ಲಿ ಬದಲಾವಣೆ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ :

   ಗೂಗಲ್‌ ಪೇ ಬಳಕೆದಾರರೇ ಗಮನಿಸಿ : ʼಜ.1ʼರಿಂದ ʼಗೂಗಲ್ ಪೇ ಪಾವತಿʼ ನಿಯಮದಲ್ಲಿ ಬದಲಾವಣೆ

   ಹೊಸ ವರ್ಷ ಗೂಗಲ್ ಪೇ (Google Pay)ಬಳಕೆದಾರರ ಮೇಲೂ ಪರಿಣಾಮ ಬೀರಬಹುದು. ಹೌದು, ಜನವರಿ 1, 2022 ರಿಂದ, ಗೂಗಲ್ ಪೇ ಕಾರ್ಡ್ ಸಂಖ್ಯೆ ಮತ್ತು ಅಂತಿಮ ದಿನಾಂಕದಂತಹ ವಿವರಗಳನ್ನ ಸಂಗ್ರಹಿಸುವುದಿಲ್ಲ.

         ಹೆಚ್ಚು ಹೆಚ್ಚು ಜನರು ಗೂಗಲ್ ಪೇ ಮೂಲಕ ಪಾವತಿಸುತ್ತಿದ್ದಾರೆ. ನೀವು ಕೂಡ ಗೂಗಲ್ ಪೇ (Google Pay) ಬಳಸುತ್ತಿದ್ರೆ, ನಿಮಗಿದು ಪ್ರಮುಖ ಸುದ್ದಿಯಾಗಬೋದು. ಗೂಗಲ್ ಪೇ ಹೊಸ ನಿಯಮಗಳನ್ನ ತರುತ್ತಿದ್ದು, ಜನವರಿ 1ರಿಂದ ಹೊಸ ನಿಯಮಗಳು ಜಾರಿಗೆ ತರುತ್ತಿದೆ.

ಇದು ಗೂಗಲ್ ಪೇ ಬಳಕೆದಾರರ ಮೇಲೂ ಪರಿಣಾಮ ಬೀರಬಹುದು. ಜನವರಿ 1, 2022 ರಿಂದ, ಗೂಗಲ್ ಪೇ ಕಾರ್ಡ್ ಸಂಖ್ಯೆ ಮತ್ತು ಅಂತಿಮ ದಿನಾಂಕದಂತಹ ವಿವರಗಳನ್ನ ಸಂಗ್ರಹಿಸುವುದಿಲ್ಲ.

ಇದರರ್ಥ ನಿಮ್ಮ ಕಾರ್ಡ್ʼನ ವಿವರಗಳನ್ನು ಸಂಗ್ರಹಿಸುವುದಿಲ್ಲ. ದೇಶದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India – RBI) ನಿಯಮಗಳನ್ನ ಗೂಗಲ್ ಪೇ ಸಹ ಅನುಸರಿಸಬೇಕಾಗಿದೆ.

ಮಾಸಿಕ ಚಂದಾದಾರಿಕೆ ಪಾವತಿಗಳಿಗಾಗಿ ಗೂಗಲ್ ಪೇನಲ್ಲಿ ಕಾರ್ಡ್ ವಿವರಗಳನ್ನ ಉಳಿಸಿದವರು ಈ ಹೊಸ ನಿಯಮದ ಬಗ್ಗೆ ತಿಳಿದಿರಬೇಕು. ಆರ್ ಬಿಐ ನಿಯಮವು ವ್ಯಾಪಾರಿಗಳು ಮತ್ತು ಇತರ ಕಂಪನಿಗಳು ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್ ವರ್ಕ್ ಕಂಪನಿಗಳನ್ನ ಹೊರತುಪಡಿಸಿ,

ಗ್ರಾಹಕರ ಕಾರ್ಡ್ ವಿವರಗಳನ್ನ ಸಂಗ್ರಹಿಸಬಾರದು ಎಂದು ಹೇಳುತ್ತದೆ. ಗ್ರಾಹಕರ ಕಾರ್ಡ್ ಡೇಟಾ ಈಗಾಗಲೇ ಉಳಿಸಿದ್ದರೆ, ಅವುಗಳನ್ನು ಅಳಿಸಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap