ಕೊರಟಗೆರೆ:
ಮಳೆಯಿಂದ ಬಹುತೇಕ ತಾಲ್ಲೂಕಿನ ಹಲವು ಕಡೆ ಮನೆಗಳು ಬಿದಿದ್ದು, ರಸ್ತೆಗಳು ಹಾಳಾಗಿದ್ದು, ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಶೀಘ್ರ ಅಗತ್ಯ ಪರಿಹಾರವನ್ನು ಕಲ್ಪಿಸುವಂತೆ ಸೂಚಿಸಿರುವುದಾಗಿ ಶಾಸಕ ಡಾ. ಜಿ ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜಿ. ನಾಗೇನಹಳ್ಳಿ, ಸಂಕೇನಹಳ್ಳಿ ಗೊಲ್ಲರಹಳ್ಳಿ, ಹಂಚಿಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.
ಈಗಾಗಲೇ ತಾಲ್ಲೂಕು ಆಡಳಿತದ ವತಿಯಿಂದ ಸಹಾಯ ವಾಣಿಗಳನ್ನು ತೆರೆದಿದ್ದು, ತೀವ್ರ ತೊಂದರೆಯಾದರೆ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣದ ಪರಿಹಾರವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿದರು.
ಸರ್ಕಾರಕ್ಕೆ ಒತ್ತಾಯ :-
ಮಳೆಯಿಂದ ಹಾನಿಗೊಳಗಾಗಿರುವಂತಹ ಮನೆಗಳನ್ನು ಈಗ ಸುಸ್ಥಿತಿಗೆ ತರಲಾಗುವುದಿಲ್ಲ. ಪ್ರಕೃತಿ ವಿಕೋಪದಡಿಯಲ್ಲಿಯೇ ಶೀಘ್ರವಾಗಿ ವಸತಿ ನಿರ್ಮಿಸಿಕೊಳ್ಳಲು ಬೇರೆ ಯಾವುದೇ ವಸತಿ ನಿಲಯಗಳ ಆಶ್ರಯವಿಲ್ಲದೇ ಶೀಘ್ರ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ವಸತಿ ಸಚಿವರಿಗೆ ಮತ್ತು ಮುಖ್ಯಮಂತ್ರಿಗೆ ಒತ್ತಾಯಿಸಿದರು.
ಬೋಡಬಂಡೇನಹಳ್ಳಿ-ಹಂಚಿಹಳ್ಳಿ ರಸ್ತೆಗೆ ಅನುದಾನ:- ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿಯಿಂದ ಹಂಚಿಹಳ್ಳಿಯ ವರೆಗೆ ರಸ್ತೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಈ ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಸಹ ಆಗಿದ್ದು, ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಸೋಮಶೇಖರ್, ಮಾಜಿ ಅಧ್ಯಕ್ಷ ಮೈಲಾರಪ್ಪ, ಯುವ ಅಧ್ಯಕ್ಷ ವಿನಯಕ್ ಕುಮಾರ್, ಹಂಚಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ವಿಜಯಕುಮಾರಿ, ಯೋಗಣ್ಣ, ರಂಗಾನಾಥ್, ಮುಖಂಡರಾದ ಸೋಮಶೇಖರ್, ಶಿವರಾಂ, ನಾಗರಾಜು, ಸಕ್ಕರೆ ದೇವರಾಜು, ಕಂದಾಯ ನಿರೀಕ್ಷಕ ಪ್ರತಾಪ್, ಪಿಡಿಓ ಮೈಲಣ್ಣ, ಗ್ರಾಮಲೆಕ್ಕಿಗ ಪವನ್ ಕುಮಾರ್ ಸೇರಿದಂತೆ ಇತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
