ಪ್ಯಾರೀಸ್:
ಟೆನ್ನೀಸ್ ಲೆಜೆಂಡ್ ನೊವಾಕ್ ಜೊಕೋವಿಕ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೊವಿಕ್ ಸ್ಪ್ಯಾನಿಷ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6(3), 7-6(2) ನೇರ ಸೆಟ್‌ಗಳಿಂದ ಮಣಿಸಿದರು.
ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಕ್ ಭಾಜನರಾಗಿದ್ದಾರೆ. ಒಲಂಪಿಕ್ಸ್ ನಲ್ಲಿ ಜೊಕೊವಿಕ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
16 ವರ್ಷಗಳ ನಂತರ ಜೊಕೊವಿಕ್ ಚಿನ್ನದ ಪದಕ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ಜೊಕೊವಿಕ್ ರಾಫೆಲ್ ನಡಾಲ್, ಸ್ಟೆಫಿ ಗ್ರಾಫ್, ಆಂಡ್ರೆ ಅಗಾಸ್ಸಿ, ಸೆರೆನಾ ವಿಲಿಯಮ್ಸ್ ಮತ್ತು ಗೋಲ್ಡನ್ ಸ್ಲಾಮ್ ವಿಜೇತರ ಸಾಲಿಗೆ ಸೇರಿದ್ದಾರೆ. ಜೊಕೊವಿಕ್ ಈಗಾಗಲೇ ಪುರುಷರ ವಿಭಾಗದಲ್ಲಿ 24 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ.