ಗುವಾಹಟಿ :
ಅಸ್ಸಾಂನ ಖಾಸಗಿ ಶಾಲೆಯೊಂದರಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಲಾಗಿರುವ ಐರಿಸ್ ಎಂಬ ಕೃತಕ ಬುದ್ಧಿಮತ್ತೆಯ ಶಿಕ್ಷಕಿಯು ವಿದ್ಯಾರ್ಥಿಗಳನ್ನು ತನ್ನ ಉತ್ತರದ ಮೂಲಕ ಜಿಜ್ಞಾಸೆಗೆ ದೂಡಿದ್ದು, ವಿದ್ಯಾರ್ಥಿಗಳೆಲ್ಲ ತನ್ನ ಉತ್ತರಕ್ಕೆ ಕಾತುರದಿಂದ ಕಾಯುವಂತೆ ಮಾಡಿದ್ದಾಳೆ.
ಮನುಷ್ಯನ ದೇಹಾಕೃತಿ ಹೊಂದಿರುವ ಈ ಯಂತ್ರಚಾಲಿತ ಕೃತಕ ಬುದ್ಧಿಮತ್ತೆ ಶಿಕ್ಷಕಿಯು ಹಿಮೋಗ್ಲೋಬಿನ್ ಎಂದರೇನು ಎಂಬ ಪ್ರಶ್ನೆಗೆ ಎಲ್ಲ ಬಗೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದಳು ಎಂದು ಶಾಲಾ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಯಲ್ ಗ್ಲೋಬಲ್ ಶಾಲೆಯ ವಕ್ತಾರರು, “ಪ್ರಶ್ನೆಗಳು ಪಠ್ಯಕ್ರಮದ ಕುರಿತಾಗಿರಲಿ ಅಥವಾ ಇನ್ನಾವುದೇ ಪ್ರಶ್ನೆಸಯಾಗಿರಲಿ ಐರಿಸ್ ಕ್ಷಣಾರ್ಧದಲ್ಲಿ ಉದಾಹರಣೆ ಹಾಗೂ ಉಲ್ಲೇಖಗಳ ಸಹಿತ ಉತ್ತರ ನೀಡಿದಳು” ಎಂದು ಮಾಹಿತಿ ನೀಡಿದ್ದಾರೆ.
ಈ ಯಂತ್ರಚಾಲಿತ ಶಿಕ್ಷಕಿಯ ಕೈಕುಲುಕುವ ಸಾಮರ್ಥ್ಯದಂಥ ನಡವಳಿಕೆಯನ್ನು ಕಂಡು ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ತಮಾಷೆ ಹಾಗೂ ತಲ್ಲೀನತೆಯನ್ನು ಅನುಭವಿಸಿದರು ಎಂದು ಹೇಳಲಾಗಿದೆ.
ಈ ಖಾಸಗಿ ಶಾಲೆಯು ಈಶಾನ್ಯ ಪ್ರಾಂತ್ಯದಲ್ಲಿ ಯಂತ್ರಚಾಲಿತ ಶಿಕ್ಷಕಿಯ ಸಾಮರ್ಥ್ಯವನ್ನು ಕಲಿಕೆಯನ್ನು ವೈಯಕ್ತೀಕರಣಗೊಳಿಸಲು ಹಾಗೂ ವಿದ್ಯಾರ್ಥಿಗಳನ್ನು ಶಿಕ್ಷಣದಲ್ಲಿ ಹೆಚ್ಚು ತಲ್ಲೀನವಾಗಿಸಲು ಬಳಸಿಕೊಳ್ಳುವ ಉದ್ದೇಶ ಹೊಂದಿದೆ ಎಂದೂ ಶಾಲಾ ವಕ್ತಾರರು ಹೇಳಿದ್ದಾರೆ.