ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ NPS ವಾತ್ಸಲ್ಯ ಯೋಜನೆಗೆ ಚಾಲನೆ : APPLY ಮಾಡೋದು ಹೇಗೆ ….?

ವದೆಹಲಿ: 

   ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ NPS ವಾತ್ಸಲ್ಯ ಯೋಜನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಚಾಲನೆ ನೀಡಿದರು.18 ವರ್ಷದೊಳಗಿನ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪೋಷಕರು ಈ ಯೋಜನೆಯಡಿ ಅಕೌಂಟ್ ತೆರೆಯಬಹುದು. ವರ್ಷಕ್ಕೆ ಕನಿಷ್ಠ 1,000 ರೂ. ಹೂಡಿಕೆ ಅಗತ್ಯವಾಗಿದೆ.

   ಇತ್ತೀಚಿನ ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು NPS ವಾತ್ಸಲ್ಯ ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದರು. ಅದು ಇವತ್ತಿನಿಂದ ಜಾರಿಗೆ ಬರುತ್ತಿದೆ. ಮಕ್ಕಳ ಹೆಸರಿನಲ್ಲಿ ತೆರೆಯಬಹುದಾದ ಈ ಯೋಜನೆಯಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಲು ಅವಕಾಶ ಇದೆ.

   NPS ವಾತ್ಸಲ್ಯ ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PERDA) ಸಂಸ್ಥೆಯಿಂದ ನಿರ್ವಹಿಸಲಾಗುವ ಯೋಜನೆ. ಭಾರತದ ಯಾವುದೇ ನಾಗರಿಕರು ತಮ್ಮ ಮಕ್ಕಳ ಹೆಸರಿನಲ್ಲಿ ಸ್ಕೀಮ್ ಅಕೌಂಟ್ ತೆರೆಯಬಹುದು. ಆ ಮಗು 18 ವರ್ಷ ವಯಸ್ಸಾಗುವವರೆಗೂ ಯೋಜನೆ ಚಾಲನೆಯಲ್ಲಿರುತ್ತದೆ. ವಯಸ್ಕ ಮಟಕ್ಕೆ ಬಂದ ಬಳಿಕ ಅಕೌಂಟ್ ಅನ್ನು ಮುಂದುವರಿಸಬಹುದು ಅಥವಾ ಅಂತ್ಯಗೊಳಿಸಬಹುದು.

  • ದೀರ್ಘಾವಧಿ ಹೂಡಿಕೆ
  • ಮಗುವಿನ ಭವಿಷ್ಯಕ್ಕೆ ಒಂದು ಹಣಕಾಸು ಭದ್ರತೆ
  • ಪ್ರೌಢಾವಸ್ಥೆಗೆ ಬರುವಾಗಲೇ ಮಕ್ಕಳಲ್ಲಿ ಉಳಿತಾಯ ಮತ್ತು ಹೂಡಿಕೆ ಪ್ರವೃತ್ತಿ ಬೆಳೆಸಲು ಅನುಕೂಲ.
  • ಉನ್ನತ ಶಿಕ್ಷಣಕ್ಕೆ ಹಣ ಕೂಡಿಡಲು ಉತ್ತಮ ಮಾರ್ಗ
  • ರಿಸ್ಕ್​ಗೆ ತಕ್ಕಂತೆ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ

    NPS ವಾತ್ಸಲ್ಯ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 1,000 ಸಾವಿರ ರೂ. ಹೂಡಿಕೆ ಅಗತ್ಯವಾಗಿದೆ. ಅದಕ್ಕಿಂತ ಹೆಚ್ಚಿಗೆ ಎಷ್ಟು ಬೇಕಾದರೂ ಹೂಡಿಕೆ ಮಾಡಲು ಅವಕಾಶ ಇದೆ. ಮಗುವಿನ ಹೆಸರಿನಲ್ಲಿ ಪೋಷಕರು ಹೂಡಿಕೆ ಮಾಡುತ್ತಾರೆ. ಮಗು 18 ವರ್ಷ ವಯಸ್ಸು ಆದ ಬಳಿಕ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಆದರೆ, ಹೊಸದಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

   ಎನ್​ಪಿಎಸ್ ವಾತ್ಸಲ್ಯ ಯೋಜನೆ ಅಡಿಯಲ್ಲಿ ಆನ್ ಲೈನ್, ಕೇಂದ್ರೀಯ ಬ್ಯಾಂಕ್ ಗಳು ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ತೆರೆದು ಮೂರು ವರ್ಷಗಳ ಬಳಿಕ ಭಾಗಶಃ ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಮಗುವಿನ ವಯಸ್ಸು 18 ವರ್ಷ ಆಗುವವರೆಗೂ ಈ ರೀತಿ ಮೂರು ಬಾರಿ ಸ್ವಲ್ಪ ಹಣವನ್ನು ಹಿಂಪಡೆಯಬಹುದು.

   ಹದಿನೆಂಟು ವರ್ಷ ವಯಸ್ಸಿನ ಬಳಿಕ ಯೋಜನೆಯಿಂದ ಬೇಕಾದರೆ ಹೊರಬರಬಹುದು. ನಿಮ್ಮ ಹೂಡಿಕೆ ಆ ಸಂದರ್ಭದಲ್ಲಿ 2-50 ಲಕ್ಷ ರೂ. ಗಿಂತ ಕಡಿಮೆ ಇದ್ದರೆ ಇಡೀ ಹಣವನ್ನು ಹಿಂಪಡೆಯಬಹುದು. 2.5 ಲಕ್ಷ ರೂ.ಗಿಂತ ಹೆಚ್ಚಿಗೆ ಇದ್ದರೆ ಶೇ. 20ರಷ್ಟು ಹಣವನ್ನು ಲಂಪ್ಸಮ್ ಆಗಿ ಪಡೆಯಬಹುದು. ಇನ್ನುಳಿದ ಶೇ. 80ರಷ್ಟು ಹಣವನ್ನು ಆಯನುಟಿ ಖರೀದಿಗೆ ಬಳಸಬೇಕು. ಈ ಆಯನುಟಿಯಿಂದ ನಿಯಮಿತವಾಗಿ ಆದಾಯ ಬರುತ್ತಿರುತ್ತದೆ.

Recent Articles

spot_img

Related Stories

Share via
Copy link
Powered by Social Snap