ತಮಿಳುನಾಡು :
ನಿತ್ಯಾ ಮೆನನ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗೆ ಸಾಕಷ್ಟು ಖ್ಯಾತಿ ಸಿಕ್ಕಿದೆ. ಅವರ ಇನೀಶಿಯಲ್ ಇರೋದು ಮೆನನ್ ಎಂದು. ಆದರೆ, ಅವರ ಅಡ್ಡ ಹೆಸರು ಮೆನನ್ ಅಲ್ಲವೇ ಅಲ್ಲ. ಅವರು ಇದನ್ನು ಇಟ್ಟುಕೊಳ್ಳಲು ಒಂದು ಉದ್ದೇಶ ಇತ್ತು. ಆದರೆ, ಉದ್ದೇಶ ಸಂಪೂರ್ಣವಾಗಿ ಹಾಳಾಗಿದೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಹೆಸರಿನ ಕೊನೆಯಲ್ಲಿ ಏನಾದರೂ ಇದ್ದರೆ ಅವರು ಯಾವ ಜಾತಿ ಎಂದು ಸುಲಭದಲ್ಲಿ ಕಂಡು ಹಿಡಿಯಬಹುದು. ಆದರೆ, ಈ ವಿಚಾರ ನಿತ್ಯಾ ಮೆನನ್ಗೆ ಇಷ್ಟ ಆಗುವುದಿಲ್ಲ. ಹೀಗಾಗಿ ಅವರು ಇನೀಶಿಯಲ್ ಇಟ್ಟುಕೊಳ್ಳುವಾಗ ಬೇರೆಯದೇ ತಂತ್ರ ಉಪಯೋಗಿಸಿದ್ದರು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
‘ನಾನು ಈ ವಿಚಾರವನ್ನು ಮೊದಲು ಹೇಳ್ತಿರೋದು. ನಾನು ಕ್ರಿಯೇಟ್ ಮಾಡಿದ ಸರ್ನೇಮ್ ಅದು (ಮೆನನ್). ನಾವು ಚಿಕ್ಕವಯಸ್ಸಿನಲ್ಲಿರುವಾಗ ಇನೀಶಿಯಲ್ ಇತ್ತು. ನನ್ನ ಹೆಸರು ಎನ್ಎಸ್ ನಿತ್ಯಾ ಎಂದು ಇತ್ತು. ಟ್ರಾವೆಲ್ ಮಾಡುವಾಗ ಕಷ್ಟ ಆಗುತ್ತದೆ ಎಂದು ನನಗೆ ಇನೀಶಿಯಲ್ ಬೇಕು ಎಂದೆ. ನನ್ನ ಹೆಸರನ್ನು ಅವರು ನ್ಯುಮರಲಾಜಿ ಪ್ರಕಾರ ಇಟ್ಟಿದ್ದರು. ಹೀಗಾಗಿ ನಾನೇ ನ್ಯುಮರಲಾಜಿ ಕಲಿತೆ. ಹೀಗಾಗಿ ಅದನ್ನೇ ಇಟ್ಟುಕೊಂಡೆ. ನ್ಯೂಟ್ರಲ್ ಆಗಿರುತ್ತದೆ ಎಂದುಕೊಂಡೆ. ಆದರೆ, ಈಗ ಎಲ್ಲರೂ ಮೆನನ್ ಎನ್ನುತ್ತಾರೆ’ ಎಂದಿದ್ದಾರೆ ನಿತ್ಯಾ.
ನಿತ್ಯಾ ಎಂದರೆ ಅನೇಕರಿಗೆ ಗೊತ್ತಾಗುವುದಿಲ್ಲ. ನಿತ್ಯಾ ಮೆನನ್ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಚಿತ್ರರಂಗದಲ್ಲಿ ಅವರು ಅಷ್ಟು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ವಿವಿಧ ಪಾತ್ರಗಳ ಮೂಲಕ ನಟನೆ ಮಾಡಿ ಅವರು ಗಮನ ಸೆಳೆದಿದ್ದಾರೆ. ಈಗ ನಿತ್ಯಾ ಮೆನನ್ ಅವರು ಅಪರೂಪದ ವಿಚಾರ ರಿವೀಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.ನಿತ್ಯಾ ಮೆನನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ಕನ್ನಡದಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ತಮಿಳಿನ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗೆ ಅವರಿಗೆ ಈ ಬಾರಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಅವರು ಇತ್ತೀಚೆಗೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ.