ಶಿರಸಿ :
ಶಿರಸಿ ಕಾರ್ಮಿಕ ಇಲಾಖೆ ಕಾರ್ಮಿಕ ವಿರೋಧಿ ಇಲಾಖೆಯಾಗಿ ಮಾರ್ಪಟ್ಟಿದೆ.ಇಲ್ಲಿನ ಕಾರ್ಮಿಕ ಅಧಿಕಾರಿ ಭರತ ನಾಯಕ ಅದೆಲ್ಲಿ ನಾಪತ್ತೆಯಾಗಿದ್ದಾನೆ ಗೊತ್ತಿಲ್ಲ!ಈತನ ಸೇವೆ ಎಲ್ಲಿ ? ಯಾರಿಗೆ?ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇಂತಿರ್ಪ ಇಲಾಖೆಯಲ್ಲಿ ಈಗ ಪ್ರಭಾರಿಗಳದ್ದೇ ಆಡಳಿತ.ಇಲಾಖೆಯೇ ಒಂದು ರೀತಿ ಅನಾಥವಾಗಿರುವoತಿದ್ದು, ಕಾರ್ಮಿಕರ ಹಿತರಕ್ಷಣೆಗೆ ಇರಬೇಕಾದ ಇಲಾಖೆ ಸಂಪೂರ್ಣವಾಗಿ ಕಾರ್ಮಿಕರಿಂದ ದೂರವಾಗಿದೆ.
ಅನರ್ಹರಿಗೆ ಕಾರ್ಮಿಕ ಕಾರ್ಡ ನೀಡಿರುವುದು ಕೂಡ ಇಲ್ಲಿನ ಇನ್ನೊಂದು ಬಹುದೊಡ್ಡ ಕರ್ಮಕಾಂಡ!ಈಗ ಇಲ್ಲಿ ಅಶಕ್ತ ಕಾರ್ಮಿಕರಿಗಾಗಿ ನೀಡಬೇಕಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನ್ಯೂಟ್ರಿಷಿಯನ್ ಕಿಟ್ ಕಾರ್ಮಿಕರಿಗೆ ನೀಡದೆ ಇಲಾಖೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ನ್ಯೂಟ್ರಿಷಿಯನ್ ಕಿಟ್ ವರ್ಷಗಳಿಂದ ವಿತರಣೆ ಯಾಗದೆ ಸಂಪೂರ್ಣವಾಗಿ ಅವಧಿ ಮೀರಿರುವ ಶಂಕೆ ಇದ್ದು ಸಮಗ್ರ ತನಿಖೆ ಆಗಬೇಕಾಗಿದೆ.
ದಲಿತ ಸಂಘರ್ಷ ಸಮಿತಿಯ ತಾಲೂಕ ಅಧ್ಯಕ್ಷ ಹಾಗೂ ಭೀಮ ಘರ್ಜನೆ ಸಂಘಟನೆಯ ಉಪಾಧ್ಯಕ್ಷ ಅಮಿತ ಜೋಗಳೇಕರ್ ಈ ಬಗ್ಗೆ (ಕಾರ್ಮಿಕರಿಗೆ ಕಿಟ್ ವಿತರಿಸದಿರುವ ಕುರಿತು)ಕಾರ್ಮಿಕ ಇಲಾಖೆಯನ್ನು ಪ್ರಶ್ನಿಸಿದಾಗ ನ್ಯೂಟ್ರಿಷಿಯನ್ ಕಿಟ್ ಕಾರ್ಮಿಕರಿಗೆ ವಿತರಿಸದೆ ಇರುವುದು ಬಯಲಿಗೆ ಬಂದಿದೆ.ಇಲ್ಲಿ ಕೂಡಲೇ ತನಿಖೆ ಆಗಬೇಕಾಗಿದೆ.








