ದಾವಣಗೆರೆ :
ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ನಗರದಲ್ಲಿ ಸಿದ್ಧತೆ ನಡೆದಿದೆ.ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲದ ಜೊತೆಗೆ ಸಕ್ಕರೆ ಅಚ್ಚು, ಹಣ್ಣು ಮತ್ತು ಕಬ್ಬಿನ ತುಂಡು ನೀಡಿ ಶುಭಾಶಯ ಕೋರುವುದು ನಂಬಿಕೆಯಾಗಿದೆ. ಹೀಗಾಗಿ ಸಂಕ್ರಾಂತಿ ಹಬ್ಬ ಆಚರಣೆಗೆ ಬೇಕಾದ ಕಬ್ಬಿನ ಜಲ್ಲೆ, ಬೆಲ್ಲ, ಕಡ್ಲಿ, ಎಳ್ಳು ಹಾಗೂ ಸಕ್ಕರೆ ಅಚ್ಚುಗಳ ಬೆಲೆ ಗಗನಮುಖಿಯಾಗಿವೆ. ಹೀಗಾಗಿ ಈ ಬಾರಿಯ ಸಂಕ್ರಾಂತಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದಂತಾಗಿದೆ.
ಕೆಜಿ ಎಳ್ಳಿಗೆ 120-130 ರೂ, ಒಣ ಕೊಬ್ಬರಿ ಕೆಜಿಗೆ 160 ರೂ, ಬೆಲ್ಲ ಕೆಜಿಗೆ 40ರಿಂದ 45 ರೂ, ಒಂದು ಕಬ್ಬಿನ ಜಲ್ಲೆಗೆÉ 30ರಿಂದ 35 ರೂ. ಕೆಜಿ ಕಡ್ಲಿಗೆ 80 ರೂ, ಕೆಜಿ ಸಕ್ಕರೆ ಅಚ್ಚಿಗೆ 160 ರೂ. ಬೆಲೆ ನಿಗದಿಯಾಗಿತ್ತು. ಸೋಮವಾರ ಹಬ್ಬ ಆಚರಣೆಗೆ ಅಂತಿಮ ಸಿದ್ಧತೆ ಬೆಲೆ ಏರಿಕೆಯನ್ನು ಲೆಕ್ಕಿಸದೇ, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಆದರೆ, ಹಿಂದಿನ ಸಂಕ್ರಾಂತಿ ಹಬ್ಬಗಳ ದಿನ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದ್ದ ಜನ ಸಂದಣಿ ಈ ಬಾರಿ ಕಂಡು ಬರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ