ಧೆಂಕನಾಲ್(ಒಡಿಶಾ) :
ಒಡಿಶಾದಲ್ಲಿ ತರಬೇತಿ ವಿಮಾನ ಪತನವಾಗಿದ್ದು, ಓರ್ವ ಮಹಿಳಾ ಪೈಲಟ್ ಸೇರಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ.
ಲಾಕ್ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ತರಬೇತಿ ಕೇಂದ್ರಗಳು ಆರಂಭವಾಗಿದೆ. ಆರಂಭವಾದ ಮೊದಲ ದಿನವೇ ದುರಂತ ಸಂಭವಿಸಿದೆ. ಧೆಂಕನಾಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಏರ್ ಕ್ರಾಫ್ಟ್ ನೆಲಕಪ್ಪಳಿಸಿದೆ. ತರಬೇತಿ ಲಘು ವಿಮಾನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ.
ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ತರಬೇತಿ ವೇಳೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನವಾಗಿದೆ ಎನ್ನಲಾಗಿದ್ದು, ತರಬೇತಿ ನಿರತ ಮಹಿಳಾ ಪೈಲಟ್ ಹಾಗೂ ಇನ್ ಸ್ರಕ್ಟರ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ