ನ. 28 ಆರೋಗ್ಯ ತಪಾಸಣಾ ಶಿಬಿರ

ತುರುವೇಕೆರೆ:

ಜಯಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಯಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಎಸ್.ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಕಳೆದೆರಡು ವರ್ಷದಿಂದ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದರಿಂದ ನಮ್ಮ ಸಂಘಟನೆಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಕೊರೋನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ಬೆಂಗಳೂರು ವೈದೇಹಿ ಆಸ್ಪತ್ರೆ ಹಾಗೂ ಬೆಂ. ಅಶ್ವಿನಿ ನೇತ್ರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಇದೇ 28ರ ಭಾನುವಾರದಂದು ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30 ರವರೆಗೆ ಏರ್ಪಡಿಸಲಾಗಿದೆ.

ಸುಮಾರು 25 ಕ್ಕೂ ಹೆಚ್ಚು ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು ಕಣ್ಣಿನ ತಪಾಸಣೆ, ಹೃದಯ ರೋಗ, ಇಸಿಜಿ. ಎಕೋ, ಬಿ.ಪಿ., ಶುಗರ್, ಪೈಲ್ಸ್, ಹರ್ನಿಯಾ, ಅಂಪೆಂಡಿಸೈಟಿಸ್, ಸ್ತ್ರೀರೋಗ ಮತ್ತು ಪ್ರಸೂತಿ, ಕಿವಿ, ಗಂಟಲು, ಮೂಗು, ನರರೋಗ, ಚರ್ಮರೋಗ ಸೇರಿದಂತೆ ಹಲವಾರು ರೋಗಗಳ ತಪಾಸಣೆ ನಡೆಯಲಿದೆ. ಚಿಕಿತ್ಸೆ ಅವಶ್ಯಕತೆಯಿದ್ದವರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವುದು. ಉಚಿತ ಕನ್ನಡಕ ಮತ್ತು ಔಷಧಿ ಉಚಿತವಾಗಿ ನೀಡಲಿದ್ದು, ತಾಲ್ಲೂಕಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಈ ಮೂಲಕ ಮನವಿ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಜಯಕರ್ನಾಟಕ ತಾಲ್ಲೂಕು ಘಟಕದ 9ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗೂ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ನ. 29ರಂದು ಸೋಮವಾರ ಬೆಳಗ್ಗೆ ಸಿಪಿಐ ನವೀನ್ ಹಾಗೂ ಪಿಎಸ್‍ಐ ಕೇಶವಮೂರ್ತಿಯವರಿಂದ ಧ್ವಜಾರೋಹಣ ಮತ್ತು ಸಂಜೆ 6ಕ್ಕೆ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಏರ್ಪಡಿಸಿದೆ.

ಇದರ ಅಧ್ಯಕ್ಷತೆಯನ್ನು ಶಾಸಕ ಮಸಾಲ ಜಯರಾಮ್ ವಹಿಸಲಿದ್ದಾರೆ. ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಯಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಹಾಗೂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಕೊರೋನಾ ವಾರಿಯರ್ಸ್‍ಗಳನ್ನು ಇದೇ ಸಂದರ್ಭದಲ್ಲಿ ಗುರ್ತಿಸಿ ಸನ್ಮಾನಿಸಲಾಗುವುದು. ಬೀರೂರಿನ ನ್ಯೂ ಸೋನಿ ಮೆಲೋಡಿಸ್‍ರವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ  ಶಸ್ವಿಗೊಳಿಸುವ ಮೂಲಕ ತÀಮಗೆ ಪ್ರೋತ್ಸಾಹ ನೀಡಬೇಕೆಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ಘಟಕದ ತಾ.ಅಧ್ಯಕ್ಷ ಮಹಮದ್ ನೂರುಲ್ಲಾ, ಉಪಾಧ್ಯಕ್ಷ ಪ್ರಕಾಶ್, ಮಂಜುನಾಥ್, ವಿವಿಧÀ ಪದಾಧಿಕಾರಿಗಳಾದ ಗವಿರಂಗಪ್ಪ, ಸವಿತಾ ಕೃಷ್ಣಮೂರ್ತಿ, ಶಿವಕುಮಾರ್‍ಸ್ವಾಮಿ, ರಫೀಕ್, ಮೊಹಮದ್ ನೂರುಲ್ಲಾ, ಸುರೇಶ್‍ರಾವ್, ಯಾಸಿನ್, ಷಫೀರ್, ಇಸ್ಮಾನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap