ಬೆಂಗಳೂರು
ಇತ್ತೀಚೆಗೆ ಕುಂಭಮೇಳದಲ್ಲಿ ವ್ಯಕ್ತಿಯೊಬ್ಬ ಜನಜಂಗುಳಿಯ ನಡುವೆ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಮಹಿಳೆಯೊಬ್ಬಳು ಚಲಿಸುತ್ತಿರುವ ಬೈಕ್‌ನ ಹಿಂಬದಿ ಕುಳಿತು ಲ್ಯಾಪ್‌ಟಾಪ್ ಓಪನ್ ಮಾಡಿಕೊಂಡು ಆಫೀಸ್ ಕೆಲಸ ಮಾಡಿರುವ ಘಟನೆ ವರದಿಯಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ಆಗಿದೆ. ವೈರಲ್ ವಿಡಿಯೊದಲ್ಲಿ ಮಹಿಳೆ ಲ್ಯಾಪ್‍ಟಾಪ್ ಹಿಡಿದುಕೊಂಡು ಬೈಕ್‍ನ ಹಿಂದೆ ಕುಳಿತಿದ್ದಾಳೆ. ಟ್ರಾಫಿಕ್‍ನಲ್ಲಿ ಬೈಕ್ ನಿಂತ ಸಮಯದಲ್ಲಿ ಆಕೆ ಮೀಟಿಂಗ್ ಅಟೆಂಡ್ ಮಾಡಿರುವ ದೃಶ್ಯ ವೈರಲ್ ವಿಡಿಯೊದಲ್ಲಿದೆ.
ಈ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆ ‘ಫೌಂಡ್ ದಿ ಜಾಬ್’ನಲ್ಲಿ ಪೋಸ್ಟ್ ಮಾಡಲಾಗಿದೆ. ಬೈಕ್‌ನಲ್ಲಿ ಹೋಗುತ್ತಲೇ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿರುವುದಕ್ಕೆ “ಕ್ಲಾಸಿಕ್ ಪೀಕ್ ಬೆಂಗಳೂರು ಮೊಮೆಂಟ್” ಎಂದು ಉಲ್ಲೇಖಿಸಲಾಗಿದೆ. ಫೆಬ್ರವರಿ 16 ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ವೈರಲ್ ಆಗಿದ್ದು, ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 2.8 ಲಕ್ಷ ವ್ಯೂವ್ಸ್ ಗಳಿಸಿದೆ.
ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆ ಈ ಹಿಂದೆ ಕೂಡ ನಡೆದಿದೆ. ಮಹಿಳೆಯೊಬ್ಬಳು ಕಾರು ಚಲಾಯಿಸುತ್ತ ಲ್ಯಾಪ್‍ಟಾಪ್ ಬಳಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಈ ಕಾರಣಕ್ಕೆ ಮಹಿಳೆಗೆ 1,000 ರೂ.ಗಳ ದಂಡ ವಿಧಿಸಲಾಗಿತ್ತು.
ಬೆಂಗಳೂರಿನ ಸಂಚಾರ ಉತ್ತರ ವಿಭಾಗದ ಡಿಸಿಪಿ ಈ ವಿಡಿಯೊವನ್ನು ಎಕ್ಸ್ ಅಪ್ ಲೋಡ್ ಮಾಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಇಂತಹ ಕೆಲಸ ಮಾಡಬೇಡಿ ಮನೆ ಅಥವಾ ಕಚೇರಿಯಲ್ಲಿ ಕೆಲಸ ಮಾಡುವಂತೆ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Kumbh Mela)ದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದುಬರುತ್ತಿದೆ. ಆದರೆ ಕೆಲವರಿಗೆ ಕುಂಭಮೇಳಕ್ಕೆ ಹೋಗಬೇಕೆನಿಸಿದರೂ ಕೆಲಸಕ್ಕೆ ರಜೆ ಇರದ ಕಾರಣ ಹೋಗಲು ಆಗುತ್ತಿಲ್ಲ. ಅಂತಹ ಒಬ್ಬ ಉದ್ಯೋಗಿ ಇದೀಗ ಮಹಾ ಕುಂಭಮೇಳಕ್ಕೆ ಹೋಗಲೇಬೇಕೆಂದು ಪಣತೊಟ್ಟು ಆಗಮಿಸಿ ಜನದಟ್ಟಣೆಯ ನಡುವೆ ತನ್ನ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸವನ್ನು ಮುಂದುವರಿಸಿದ್ದಾನೆ (Viral News). ಆತನ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ನೀವು ಮೋಕ್ಷ ಮತ್ತು ಸಂಬಳ ಎರಡನ್ನೂ ಒಂದೇ ಸಮಯದಲ್ಲಿ ಬಯಸಿದಾಗ” ಎಂದು ವ್ಯಕ್ತಿ ಮಾಡಿದ ಮಲ್ಟಿಟಾಸ್ಕಿಂಗ್ ಕೌಶಲ್ಯದ ಬಗ್ಗೆ ಪೋಸ್ಟ್‌ನಲ್ಲಿ ಬರೆಯಲಾಗಿದೆ. ವೈರಲ್ ಫೋಟೊದಲ್ಲಿ, ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಕಿಕ್ಕಿರಿದ ಜನಸಂದಣಿಯ ಮಧ್ಯೆ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಹಲವರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೊಕ್ಕೆ ಹೆಚ್ಚಿನ ನೆಟ್ಟಿಗರು ‘ಸ್ಮೈಲ್’ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. “ಅವರ ವಿಭಾಗದ ಮುಖ್ಯಸ್ಥರು ಈ ಫೋಟೊವನ್ನು ನೋಡಿದರೆ…” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಇಲ್ಲೊಬ್ಬ ನೆಟ್ಟಿಗರು ಈ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಮ್ಯಾನೇಜರ್ ಹೀಗಿರಬೇಕು: ಕರ್ಮ ಹಿ ಧರ್ಮ ಹೈ” ಎಂದು ಕಾಮೆಂಟ್ ಮಾಡಿದ್ದಾರೆ.
