ಒಮನ್ ಕರಾವಳಿಯಲ್ಲಿ ಮಗುಚಿ ಬಿದ್ದ ತೈಲ ಟ್ಯಾಂಕರ್ : 16 ಮಂದಿ ನಾಪತ್ತೆ,

ಮಸ್ಕತ್:

     ಒಮನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಮಗುಚಿ ಬಿದ್ದ ಪರಿಣಾಮ 13 ಮಂದಿ ಭಾರತೀಯರು ಸೇರಿ 16 ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

     ನಾಪತ್ತೆಯಾಗಿರುವವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂವರು ಶ್ರೀಲಂಕಾ ನಾಗರೀಕರು ಎಂದು ಕಡಲ ಭದ್ರತಾ ಕೇಂದ್ರ  ಮಾಹಿತಿ ನೀಡಿದೆ. ಕಾಣೆಯಾದವರ ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

    ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ‘ಪ್ರೆಸ್ಟೀಜ್ ಫಾಲ್ಕನ್’ ನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು ಎಂದು ಕಡಲ ಭದ್ರತಾ ಕೇಂದ್ರವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದೆ. ಸೋಮವಾರ ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ.

   ಟ್ಯಾಂಕರ್ ಒಮನ್ ಬಂದರಿನ ಏಡೆನ್‌ಗೆ ಹೋಗುತ್ತಿತ್ತು. ತೈಲ ಟ್ಯಾಂಕರ್ ಮುಳುಗಿದೆ ಮತ್ತು ತಲೆಕೆಳಗಾದಿದೆ ಎಂದು ಒಮನ್‌ನ ಕಡಲ ಭದ್ರತಾ ಕೇಂದ್ರವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಆದಾಗ್ಯೂ, ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.

   ತೈಲ ಟ್ಯಾಂಕರ್ ರಾತ್ರಿಯಿಂದ ನೀರಿನಲ್ಲಿ ಪಲ್ಟಿಯಾಗಿದೆ. ಈ ಹಡಗು ಸುಮಾರು 20 ವರ್ಷ ಹಳೆಯದು. ಇದನ್ನು 2007 ರಲ್ಲಿ ನಿರ್ಮಿಸಿರಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ತನ್ನ ವರದಿಯಲ್ಲಿ ತಿಳಿಸಿದೆ.

   2007 ರಲ್ಲಿ ನಿರ್ಮಿಸಲಾದ ಈ ಹಡಗು 117 ಮೀಟರ್ ಉದ್ದದ ತೈಲ ಉತ್ಪನ್ನಗಳ ಟ್ಯಾಂಕರ್ ಆಗಿದೆ ಎಂದು LSEG ಯ ಶಿಪ್ಪಿಂಗ್ ಡೇಟಾದಿಂದ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಅಂತಹ ಸಣ್ಣ ಟ್ಯಾಂಕರ್‌ಗಳನ್ನು ಸಣ್ಣ ಪ್ರಯಾಣಕ್ಕಾಗಿ ನಿಯೋಜಿಸಲಾಗುತ್ತದೆ.ಡುಕ್ಮ್ ಬಂದರು ಒಮಾನ್‌ನ ನೈಋತ್ಯ ಕರಾವಳಿಯಲ್ಲಿದೆ, ಇದು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap